ಸೈನ್ಸ್ ವಿದ್ಯಾರ್ಥಿಗಳಿಗೆ ಬ್ಯಾಡ್ ನ್ಯೂಸ್!

Public TV
1 Min Read

ಬೆಂಗಳೂರು: ವಿಜ್ಞಾನದ ವಿದ್ಯಾರ್ಥಿಗಳು ಅಂದರೆ ಸಂಶೋಧನೆ, ಪ್ರಾಕ್ಟಿಕಲ್ ವರ್ಕ್ ಮಾಡೋದು ಸಹಜ. ವಿವಿಧ ಪ್ರಾಣಿಗಳು, ಜಂತುಗಳನ್ನು ಬಳಸಿ ಯಾವಾಗಲು ಲ್ಯಾಬ್‍ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಇದೀಗ ವಿಜ್ಞಾನ ಓದೋ ವಿದ್ಯಾರ್ಥಿಗಳು ಲ್ಯಾಬ್‍ಗಳಿಗೆ ಜೀವಂತ ಪ್ರಾಣಿ ಮತ್ತು ಪಕ್ಷಿ ತರುವಂತಿಲ್ಲ ಎಂದು ಪೇಟಾ ದೂರು ಕೊಟ್ಟಿದೆ.

ಹೌದು..ಸೈನ್ಸ್ ವಿದ್ಯಾರ್ಥಿಗಳು ಹೆಚ್ಚು ಸಮಯವನ್ನು ಲ್ಯಾಬ್‍ನಲ್ಲೇ ಕಳೆಯುತ್ತಾರೆ. ಇಲಿ, ಜಿರಲೆ ಇಂಥಹ ಸಣ್ಣ ಪುಟ್ಟ ಪ್ರಾಣಿಗಳನ್ನು ಕೊಯ್ದು ಅದರ ದೇಹ ಮತ್ತು ಅಂಗ ರಚನೆ ಬಗ್ಗೆ ಪಾಠ ಕಲಿಯುತ್ತಾರೆ. ಆದರೆ ಈಗ ಸೈನ್ಸ್ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಇದು ಬೇಸರದ ಸುದ್ದಿಯಾಗಿದ್ದು, ಜೀವಂತ ಪ್ರಾಣಿಗಳನ್ನ ತಂದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೋಧನೆ ಮಾಡುವುದು ಸರಿಯಲ್ಲ ಅಂತ ಪ್ರಾಣಿ ದಯ ಸಂಘ ಪೇಟಾ ಸೇರಿ ಹಲವು ಸಂಘಟನೆಗಳು ಶಿಕ್ಷಣ ಇಲಾಖೆಗೆ ದೂರು ಕೊಟ್ಟಿವೆ.

ದೂರಿನನ್ವಯ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗದ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠ ಮಾಡುವಂತೆ ಉಪನ್ಯಾಸಕರಿಗೆ ಸುತ್ತೋಲೆ ಹೊರಡಿಸಿದೆ.

ಈ ಹಿಂದೆ ವೈಜ್ಞಾನಿಕ ಪ್ರಾಯೋಗಿಕ ತರಗತಿಗಳಲ್ಲಿ ಕಪ್ಪೆ, ಜಿರಳೆ, ಮೀನು ಸೇರಿದಂತೆ ಪಕ್ಷಿಗಳ ದೇಹ ಅಂಗರಚನೆಗೆ ಜೀವಂತ ಪ್ರಾಣಿಗಳನ್ನು ತಂದು ಪಾಠ ಮಾಡಲಾಗುತ್ತಿತ್ತು. ಆದರೆ ಈಗ ಕಂಪ್ಯೂಟರ್, 3ಡಿ ಮಾಡೆಲ್, ವರ್ಚುಯಲ್ ರಿಯಾಲಿಟಿ ಮೂಲಕ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಬೋಧಿಸಬೇಕಿದೆ. ಆದರೆ ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ ಪಿಯು ಮಂಡಳಿಯ ಉಪ ನಿರ್ದೇಶಕರು ಅಸಾದುಲ್ಲಾ ಖಾನ್ ತಿಳಿಸಿದ್ದಾರೆ.

ವೈಜ್ಞಾನಿಕ ಕ್ಷೇತ್ರಗಲ್ಲಿ ದಿನಕ್ಕೊಂದು ಸಂಶೋಧನೆಗಳು ನಡೆಯುವ ಈ ಕಾಲದಲ್ಲೂ ಈ ರೀತಿಯ ನಿರ್ಬಂಧ ಹೇರುವುದು ಎಷ್ಟು ಸರಿ ಅನ್ನೋದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಪ್ರಶ್ನೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *