ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದ ಹಂತಕರು

Public TV
1 Min Read

ಮುಂಬೈ: ಮಹಾರಾಷ್ಟ್ರ (Maharashtra) ಮಾಜಿ ಸಚವ ಹಾಗೂ ಎನ್‌ಸಿಪಿ (NCP) ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ (Baba Siddique Murder Case) ಹಂತಕರು ರಾಯಗಢ ಜಲಪಾತದ (Raigad Falls) ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಅ.12 ರಂದು ನಡೆದ ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಇನ್ನೋರ್ವ ಆರೋಪಿ ಶಿವಕುಮಾರ್ ಎಂಬುವವನನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.ಇದನ್ನೂ ಓದಿ: ಆಪರೇಷನ್ ಆಲೌಟ್ ಜೆಡಿಎಸ್ – ಸಿಎಂ ಮುಂದೆ ಡಿಕೆಶಿ ಶಪಥ

ಇದಕ್ಕೂ ಮುನ್ನ ಹತ್ಯೆಯ ಮೂರು ಆರೋಪಿಗಳಾದ ಧರ್ಮರಾಜ್ ಕಶ್ಯಪ್, ಗುರ್ಮೈಲ್ ಸಿಂಗ್ ಮತ್ತು ಪರಾರಿಯಾಗಿರುವ ಶಿವಕುಮಾರ್ ಯೂಟ್ಯೂಬ್ ನೋಡಿ ಶೂಟಿಂಗ್ ಕಲಿತಿದ್ದರು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಇದೀಗ ಇನ್ನೊಂದು ಮಾಹಿತಿ ಲಭಿಸಿದ್ದು, ಹಂತಕರು ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದರು.

ಸೆಪ್ಟೆಂಬರ್ ತಿಂಗಳಲ್ಲಿ ಮುಂಬೈನ (Mumbai) ಹೊರವಲಯದಲ್ಲಿರುವ ಕರ್ಜತ್ ಎಂಬ ಪ್ರದೇಶದ ಬಳಿಯಿರುವ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಬಾ ಸಿದ್ದಿಕಿಯನ್ನು ಹತ್ಯೆಮಾಡಲು ಥಾಣೆ ಮೂಲದ ನಿತಿನ್ ಸಪ್ರೆ, ರಾಮ್ ಕನೂಜಿಯಾ ನೇತೃತ್ವದ ಐದು ಸದಸ್ಯರ ತಂಡಕ್ಕೆ ಸುಪಾರಿಯನ್ನು ನೀಡಲಾಗಿತ್ತು. ಜೊತೆಗೆ ಅಪರಾಧಕ್ಕೆ ಬಳಸಲಾದ ಪಿಸ್ತೂಲ್‌ಗಳನ್ನು ಕೂಡ ರಾಜಸ್ಥಾನದಿಂದ ತರಿಸಲಾಗಿತ್ತು. ಸುಪಾರಿಗಾಗಿ 50 ಲಕ್ಷ ರೂ.ಯನ್ನು ಇರಿಸಲಾಗಿದ್ದು, ಈ ಮೊತ್ತದ ಬೇಡಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಈ ತಂಡ ಹಿಂದೆ ಸರಿಯಿತು.

ಈ ವೇಳೆ ಬಾಬಾ ಸಿದ್ದಿಕಿ ಹಂತಕರು ಕರ್ಜತ್ ಸ್ಥಳದ ಸಮೀಪದ ಜಲಪಾತವು ನಿರ್ಜನ ಪ್ರದೇಶವಾಗಿದ್ದು, ಅರಣ್ಯದಿಂದ ಪ್ರದೇಶ ಸುತ್ತುವರೆದಿದೆ. ಆದ್ದರಿಂದ ಆ ಸ್ಥಳದಲ್ಲಿ ಹಂತಕರು ಶೂಟಿಂಗ್ ಅಭ್ಯಾಸ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಇದು ಸಾಧ್ಯತೆಯ ಕಲೆ: ಡಿಕೆ ಶಿವಕುಮಾರ್‌

Share This Article