ಎಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ (Bahubali) ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೈಲಿಗಲ್ಲನ್ನ ಸ್ಥಾಪಿಸಿದೆ. ಎರಡು ಪಾರ್ಟ್‌ನಲ್ಲಿ ಮೂಡಿಬಂದ ಈ ಸಿನಿಮಾ ಇತಿಹಾಸದ ಪುಟಗಳಲ್ಲಿ ತನ್ನ ದಾಖಲೆಯನ್ನ ಬರೆದಿಟ್ಟಿದೆ. ದೇಶವಷ್ಟೇ ಅಲ್ಲದೇ ಇಡೀ ಜಗತ್ತಿನಾದ್ಯಂತ ಭಾರತ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದೆ. ಬಾಹುಬಲಿ ಸಿನಿಮಾ ಇಡೀ ಭಾರತೀಯ ಚಿತ್ರರಂಗಕ್ಕೆ ದಿಕ್ಸೂಚಿಯಾಗಿದೆ ಅಂದ್ರೆ ಅತೀಶಯೋಕ್ತಿಯಾಗಲಾರದು.
ದಾಖಲೆಗಳ ಮೇಲೆ ದಾಖಲೆಗಳನ್ನ ಮಾಡಿರುವ ಬಾಹುಬಲಿ ಸಿನಿಮಾಗೆ ದಶಕದ ಸಂಭ್ರಮ. ಜುಲೈ 10ರಂದು ತೆರೆಕಂಡ ಬಾಹುಬಲಿ ಪಾರ್ಟ್-1 ಸಿನಿಮಾಗೆ 2025ರ ಜುಲೈ 10ಕ್ಕೆ ಭರ್ತಿ 10 ವರ್ಷ ತುಂಬಿದೆ. ಈ ಖುಷಿ ವಿಚಾರವನ್ನ ನಿರ್ದೇಶಕ ರಾಜಮೌಳಿ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಆ ಜರ್ನಿಯನ್ನ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.
Baahubali…
The beginning of many journeys.
Countless memories.
Endless inspiration.
It’s been 10 years.Marking this special milestone with #BaahubaliTheEpic, a two-part combined film.
In theatres worldwide on October 31, 2025. pic.twitter.com/kaNj0TfZ5g
— rajamouli ss (@ssrajamouli) July 10, 2025
ಇದೇ ಖುಷಿ ಸಂದರ್ಭದಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಬಾಹುಬಲಿ ಸಿನಿಮಾ ಮತ್ತೆ ತೆರೆಗೆ ಬರುವ ಡೇಟ್ ಕೂಡಾ ಅನೌನ್ಸ್ ಮಾಡಿದ್ದಾರೆ. ಅಕ್ಟೋಬರ್ 31ಕ್ಕೆ ವಿಶ್ವದಾದ್ಯಂತ ಬಾಹುಬಲಿ ದರ್ಶನ ಕೊಡಲಿದೆಯಂತೆ. ಪ್ರಭಾಸ್, ರಾಣಾ ದಗ್ಗುಭಾಟಿ, ರಮ್ಯ ಕೃಷ್ಣ, ಸತ್ಯರಾಜ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಮುಂತಾದವ್ರು ಈ ಚಿತ್ರದ ಯಶಸ್ಸಿನ ಭಾಗವಾಗಿದ್ದಾರೆ.