ಟೈಗರ್ ಶ್ರಾಫ್ (Tiger Shroff) ನಟನೆಯ ಬಾಘಿ ಸಿನಿಮಾದ ಸಿರೀಸ್ ಬಿಗ್ ಸಕ್ಸಸ್ ಕಂಡಿದೆ. 2016ರಲ್ಲಿ ಶುರುವಾದ ಬಾಘಿ ಜರ್ನಿ 2025ರವರೆಗೆ 4 ಆವೃತ್ತಿಗಳನ್ನ ಆವರಿಸಿದೆ. 2016ರಲ್ಲಿ ಟೈಗರ್ ಶ್ರಾಫ್ ರೋನಿಯಾಗಿ ಕಾಣಿಸಿಕೊಂಡ ಬಾಘಿ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈ ಬಿಗ್ ಸಕ್ಸಸ್ ಬಳಿಕ ನಿರ್ಮಾಪಕ ಸಾಜಿದ್ ನಡಿಯಾವಾಲಾ 2018ರಲ್ಲಿ ಬಾಘಿ-2 ಸಿನಿಮಾವನ್ನ ಕೈಗೆತ್ತಿಕೊಂಡರು. 2018ರಲ್ಲೂ ಕೂಡಾ ಪಾರ್ಟ್-2 ಸಿನಿಮಾ ಕೂಡಾ ಹಿಟ್ ಲಿಸ್ಟ್ ಸೇರಿದೆ.
2020ರಲ್ಲಿ ಬಾಘಿ-3 ಸಿನಿಮಾ ಕೊವಿಡ್ ಸಿಚುವೇಷನ್‍ನಲ್ಲಿ ತೆರೆಕಂಡ ಸಿನಿಮಾ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಬಾಘಿ-4 ಸಿನಿಮಾ ರಿಲೀಸ್‍ಗೆ ರೆಡಿಯಾಗಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ಇದೇ ಆಗಸ್ಟ್ 30ರಂದು ಬಾಘಿ-4 (Baaghi 4) ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್‍ನಿಂದಲೇ ಪ್ರೇಕ್ಷಕರನ್ನ ಅಟ್ರ್ಯಾಕ್ಟ್ ಮಾಡಿರುವ ಈ ಸಿನಿಮಾದ ಟ್ರೈಲರ್‌ಗಾಗಿ ಕಾತುರದಿಂದ ಕಾಯುತ್ತಿದೆ ಅಭಿಮಾನಿ ವರ್ಗ.
ಬಾಘಿ-4 ಸಿನಿಮಾ ಸೆಪ್ಟಂಬರ್ 5ರಂದು ರಿಲೀಸ್ ಆಗ್ತಿದ್ದು, ಸಿನಿಮಾ ಟ್ರೈಲರ್ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಸಿನಿಮಾದ ಟ್ರೈಲರ್‍ಗೆ ಕೌಂಟ್‍ಡೌನ್ ಶುರುವಾಗಿದ್ದು, ಟ್ರೈಲರ್‍ನ್ನ ಅದ್ಧೂರಿಯಾಗಿ ಲಾಂಚ್ ಮಾಡಲು ಚಿತ್ರತಂಡ ಕೂಡಾ ಭರ್ಜರಿಯಾಗಿ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾವನ್ನ ಕನ್ನಡದ ನಿರ್ದೇಶಕ ಎ.ಹರ್ಷಾ ನಿರ್ದೇಶನ ಮಾಡಿದ್ದಾರೆ.
ಅಂದಹಾಗೆ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಟೈಗರ್ ಶ್ರಾಫ್ ಜೊತೆ ಸಂಜಯ್ ದತ್, ಸೋನಮ್ ಬಜ್ವಾ, ಹರ್ನಾಜ್ ಸಂದು ಕಾಣಿಸಿಕೊಂಡಿದ್ದಾರೆ. ಸೆಪ್ಟಂಬರ್ 5ಕ್ಕೆ ತೆರೆಕಾಣಲು ರೆಡಿಯಾಗಿರುವ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ.