ತಾನು ಚಿತ್ರ ಚೆನ್ನಾಗಿ ಬಿಡಿಸಲ್ಲ ಅಂತ ಕಲಾ ಪರೀಕ್ಷೆಗೆ ಅಣ್ಣನನ್ನು ಕೂರಿಸಿದ BA ವಿದ್ಯಾರ್ಥಿ

Public TV
1 Min Read

ಲಕ್ನೋ: ತಾನು ಚಿತ್ರವನ್ನು ಚೆನ್ನಾಗಿ ಬಿಡಿಸುವುದಿಲ್ಲ ಎಂದು ತನ್ನ ಹಿರಿಯ ಸಹೋದರನ (Elder Brother) ಕೈಯಲ್ಲಿ ಬಿಎ (BA) ತರಗತಿಯ ಕಲಾ ಪರೀಕ್ಷೆಯನ್ನು (Art Exam) ಬರೆಸಿರುವ ವಿಚಿತ್ರ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ (Uttar Pradesh) ಉನ್ನಾವೋ (Unnao) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ (Younger Brother) ಪರವಾಗಿ ಪರೀಕ್ಷೆ ಬರೆಯುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಶೇರ್‌ಪುರ್ ಕಲನ್‌ನ ಶಾದಾಬ್ ಎಂದು ಗುರುತಿಸಲಾಗಿದ್ದು, ಆತ ತನ್ನ ಕಿರಿಯ ಸಹೋದರನಿಗೆ ಚೆನ್ನಾಗಿ ಚಿತ್ರ ಬಿಡಿಸಲು (Drawing) ಬರುವುದಿಲ್ಲ ಎಂಬ ಕಾರಣಕ್ಕೆ ತಾನು ಪರೀಕ್ಷೆಯನ್ನು ಬರೆಯಲು ಮುಂದಾಗಿರುವುದಾಗಿ ತಿಳಿಸಿದ್ದಾನೆ.

ವರದಿಗಳ ಪ್ರಕಾರ ಶಾದಾಬ್ ಪರೀಕ್ಷೆ ಬರೆಯಲು ಮುಸ್ತಾಫಾಬಾದ್‌ನ ಶಕುಂತಲಾ ದೇವಿ ಕಾಶಿರಾಮ್ ವಿದ್ಯಾಲಯದ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ. ಪರೀಕ್ಷೆ ಪ್ರಾರಂಭವಾಗಿ ಅರ್ಧ ಗಂಟೆಯ ಬಳಿಕ ಪರೀಕ್ಷಾ ಅಧಿಕಾರಿಗಳು ತಮ್ಮ ತಂಡದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಈ ವೇಳೆ ಪರೀಕ್ಷೆ ಬರೆಯಬೇಕಿದ್ದ ನಿಜವಾದ ಅಭ್ಯರ್ಥಿ ಮುಖೀಮ್ ಬದಲಿಗೆ ಬೇರೊಬ್ಬ ವ್ಯಕ್ತಿ ಪರೀಕ್ಷೆ ಬರೆಯುತ್ತಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

ಸಾದಾಬ್‌ನನ್ನು ಪರೀಕ್ಷಾ ಅಧಿಕಾರಿಗಳು ಪ್ರಶ್ನಿಸಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಬಳಿಕ ಶಾದಾಬ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾದಾಬ್ ತನ್ನ ಸಹೋದರನ ಬದಲಿಗೆ ಇನ್ನೂ ಬೇರೆ ಯಾವುದಾದರೂ ಪರೀಕ್ಷೆಯಲ್ಲಿ ಹಾಜರಾಗಿದ್ದನೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‌ನನ್ನು ಅವರ ಆಪ್ತ ವಲಯದವರೇ ಕೊಲ್ತಾರೆ: ಝೆಲೆನ್ಸ್ಕಿ ಭವಿಷ್ಯ

Share This Article
Leave a Comment

Leave a Reply

Your email address will not be published. Required fields are marked *