ಮುಡಾ ಕೇಸಲ್ಲಿ ಸಿದ್ದರಾಮಯ್ಯ‍ ‍& ಕುಟುಂಬ ನಿರಪರಾಧಿ ಅಂತ ಕೋರ್ಟ್‌ ಹೇಳಿಲ್ಲ: ವಿಜಯೇಂದ್ರ

Public TV
1 Min Read

ಬೆಂಗಳೂರು: ಮುಡಾ ಕೇಸ್ (MUDA Case) ತನಿಖೆಯನ್ನ ಹೈಕೋರ್ಟ್, ಸಿಬಿಐಗೆ ಕೊಡೋದು ಬೇಡ ಅಂತ ಹೇಳಿದೆಯೇ ಹೊರತು ಸಿದ್ದರಾಮಯ್ಯ ಮತ್ತು ಅವರ ಕುಟುಂಬ ನಿರಪರಾಧಿ ಅಂತ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಮಾತನಾಡಿದರು.

ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು ಎಂಬ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಬೇಕು ಅಂತ ಅರ್ಜಿ ಹಾಕಿದ್ರು. ಕೋರ್ಟ್ ಅವರ ಅರ್ಜಿ ವಜಾ ಮಾಡಿದೆ. ಸಿಬಿಐಗೆ ಕೊಡೋ ಅರ್ಜಿ ಮಾತ್ರ ಕೋರ್ಟ್ ವಜಾ ಮಾಡಿದೆ. ಆದರೆ, ಸಿದ್ದರಾಮಯ್ಯ (Siddaramaiah) ನಿರಪರಾಧಿ ಅಂತ ಹೇಳಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌ – CBI ತನಿಖೆಗೆ ವಹಿಸಲು ಹೈಕೋರ್ಟ್‌ ನಕಾರ

ಬಿಜೆಪಿ ಮುಡಾ ಅಕ್ರಮದ ವಿರುದ್ದ ಹೋರಾಟ ಮಾಡಿತ್ತು. ಪಾದಯಾತ್ರೆ ಕೂಡಾ ಮಾಡಿತ್ತು. ಇವತ್ತಿನ ಕೋರ್ಟ್ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ. ಮುಡಾ ಅಕ್ರಮದ ಬಗ್ಗೆ ಇಡಿ, ಲೋಕಾಯುಕ್ತ ತನಿಖೆ ಆಗ್ತಿದೆ. ಮುಂದೆ ಎನ್ ಆಗುತ್ತೋ ನೋಡೋಣ ಎಂದರು.

ನಮ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ. ಸಿದ್ದರಾಮಯ್ಯ ಮತ್ತು ಅವರ ಕುಟುಂಬವನ್ನ ನಿರಪರಾಧಿ ಅಂತ ಹೈಕೋರ್ಟ್‌ ಏನು ಹೇಳಿಲ್ಲ. ನಾವು ಹೋರಾಟ ಮಾಡಿದ್ದು ಸಿಎಂ ಮತ್ತು ಅವರ ಕುಟುಂಬ ಮುಡಾ ಅಕ್ರಮದಲ್ಲಿ ಭಾಗಿಯಾಗಿದೆ ಅಂತ. ನಮ್ಮ ಆರೋಪಕ್ಕೆ ನಾವು ಈಗಲೂ ಬದ್ಧ. ನೋಡೋಣ ಲೋಕಾಯುಕ್ತ ತನಿಖೆ ಆಗ್ತಿದೆ. ತನಿಖಾ ವರದಿ ಹೊರಗೆ ಬರಲಿ. ಅಮೇಲೆ ಮಾತಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: MUDA Case | ಸಿಎಂ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗ್ತೀನಿ – ಸ್ನೇಹಮಯಿ ಕೃಷ್ಣ

Share This Article