ಬಸ್ ಮುಷ್ಕರದಲ್ಲಿ ನೌಕರರ ವಜಾ ಮಾಡಿದ ವಿಚಾರ ರಾಜಕೀಯವಾಗಿ ಬಳಕೆ: ಶ್ರೀರಾಮುಲು

Public TV
2 Min Read

ಬೆಂಗಳೂರು: ಬಸ್ ಮುಷ್ಕರದಲ್ಲಿ 4 ನಿಗಮದಿಂದ 1610 ಮಂದಿಯನ್ನು ವಜಾ ಮಾಡಲಾಗಿತ್ತು. ಇದೇ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ತಾರೆ ಎಂದು ಸಚಿವ ಶ್ರೀರಾಮುಲು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಷ್ಕರ ಆಗಬಾರದಿತ್ತು. ಮುಷ್ಕರ ಮಾಡೋರು ಅರ್ಥ ಮಾಡಿಕೊಂಡ ಮಾಡಬೇಕು. ಸರ್ಕಾರದ ಆಸ್ತಿ ನಾಶ ಆಗುತ್ತದೆ. ಏನೇ ಬೇಡಿಕೆ ಇದ್ದರೂ ಮಂತ್ರಿ, ಸಚಿವರು, ಯುನಿಯನ್ ಲೀಡರ್ ಜೊತೆ ಮಾತಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು. ನಮ್ಮ ಮನೆ, ನಮ್ಮ ಸರ್ಕಾರ ಅನ್ನೋ ನಂಬಿಕೆ ಇರಬೇಕು. ಈಗಾಗಲೇ 1500 ಜನರ ಮರು ನೇಮಕಾತಿ ಮಾಡಿಕೊಳ್ಳಲಾಗಿದೆ. ನಿಮ್ಮನ್ನು ಕಳೆದುಕೊಳ್ಳಲು ನಮಗೆ ಇಷ್ಟ ಇಲ್ಲ. ಒಂದು ಬಾರಿ ವಜಾ ಆದ ಮೇಲೆ ಮತ್ತೆ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.

ಮುಷ್ಕರಕ್ಕೆ ಮುಂದೆ ನಿಂತವರು ಇವತ್ತು ಓಡಿ ಹೋಗಿದ್ದಾರೆ. ಇವತ್ತು ನಿಮ್ಮ ಜೊತೆ ಸರ್ಕಾರ ಮಾತ್ರ ಇರೋದು. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಮತ್ತೆ ಈ ತಪ್ಪು ಮಾಡಬೇಡಿ. ಯಾರನ್ನು ನಂಬಬೇಡಿ. ಸರ್ಕಾರವನ್ನು ಮಾತ್ರ ನಂಬಿ. ಮೊದಲ ಹಂತದಲ್ಲಿ 100 ಜನರಿಗೆ ಮರು ನೇಮಕ ಮಾಡಲಾಗಿದೆ. ಮುಂದೆ ಹಂತ ಹಂತದಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

700 ಜನರಿಗೆ ಮರು ಆದೇಶ: ನಿಮಗೆ ಸಂಬಳ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇವೆ. ಶೀಘ್ರವೇ ಸರಿಯಾದ ಸಮಯಕ್ಕೆ ಸಂಬಳ ಬರುವ ರೀತಿ ನೋಡಿಕೊಳ್ಳುತ್ತೇನೆ. ಈ ತಿಂಗಳಲ್ಲಿ 700 ಜನರಿಗೆ ಮರು ಆದೇಶ ಕೊಡುತ್ತೇನೆ ಎಂದ ಅವರು, ಲೋಕಾ ಅದಾಲತ್ ಕೋರ್ಟ್ ಮೂಲಕ ಪ್ರಕರಣ ಇತ್ಯರ್ಥ ಮಾಡಿ ನೇಮಕಾತಿ ಮಾಡಲಾಗಿದೆ. 1,350 ಮಂದಿಗೆ ಒಟ್ಟಾರೆ ಮರು ನೇಮಕ ಮಾಡಿಕೊಡಲಾಗುತ್ತದೆ. ಮತ್ತೆ ಇಂತಹ ಪ್ರತಿಭಟನೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ

ಎಲೆಕ್ಟ್ರಿಕ್ ಬಸ್ ಬಂದರು ನಮ್ಮ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡುವುದಿಲ್ಲ. ಕೇಂದ್ರದಿಂದ ಸಬ್ಸಿಡಿ ಮಿಸ್ ಆಗುತ್ತಿದೆ. ಹೀಗಾಗಿ ಕೇಂದ್ರದ ನಿಯಮದ ಪ್ರಕಾರ ಖಾಸಗಿ ಚಾಲಕರ ಬಳಕೆ ಮಾಡಲಾಗುತ್ತಿದೆ. ನಮ್ಮ ಚಾಲಕರನ್ನು ಯಾವುದೇ ಕಾರಣಕ್ಕೂ ತೆಗೆಯೊಲ್ಲ ಎಂದರು. ಇದನ್ನೂ ಓದಿ:  ಖಾಲಿ ಇದ್ದ ಧ್ವಜ ಸ್ತಂಭದಲ್ಲಿ ಓಂಕಾರ ಧ್ವಜ ಹಾರಿಸಲಾಗಿದೆ: ಕಟೀಲ್

ಬಸ್ ಟಿಕೆಟ್ ದರ ಏರಿಕೆಯಾಗಲ್ಲ: ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ಸೇವೆ ಮಾಡುವ ಇಲಾಖೆಯಾಗಿದೆ. ಸದ್ಯಕ್ಕೆ ಟಿಕೆಟ್ ಹೆಚ್ಚಳ ಮಾಡೋ ಬಗ್ಗೆ ಚರ್ಚೆ ಮಾಡಿಲ್ಲ. ಜನರು ಆತಂಕ ಪಡೆದೇ ಬಸ್‍ಗೆ ಬಂದರೆ ಸಾಕು. ಸದ್ಯಕ್ಕೆ ಟಿಕೆಟ್ ದರ ಹೆಚ್ಚಳ ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *