ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ

Public TV
1 Min Read

ಭಿನಯ ಸರಸ್ವತಿ ಬಿ.ಸರೋಜಾದೇವಿ (B. Saroja Devi) ಇಹಲೋಕ ತ್ಯಜಿಸಿ ದಿನಗಳು ಉರುಳಿದೆ. ಕಳೆದ ಜುಲೈ 14 ರಂದು ಸೋಮವಾರ ಬೆಳಗ್ಗೆ ಈ ಮೇರು ನಟಿ ವಯೋಸಹಜ ಕಾಯಿಲೆಯಿಂದಾಗಿ ನಿಧನ ಹೊಂದಿದ್ದರು. ಇದೀಗ ಅಗಲಿದ ಹಿರಿಯ 11ನೇ ದಿನದ ಕಾರ್ಯಗಳನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದು ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಇದೇ ಜುಲೈ 25 ರಂದು ನಡೆಯಲಿದೆ.

ಪಂಚಭಾಷಾ ತಾರೆ ಬಿ ಸರೋಜಾದೇವಿಯವರು 87ನೇ ವರ್ಷಕ್ಕೆ ಕಣ್ಮುಚ್ಚಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಸಾಧಾರಣ ನಟಿ ಇವರು. ಇವರ ಪಾರ್ಥೀವಕ್ಕೆ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮ ಚನ್ನಪಟ್ಟಣದ ದಶವಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ

 

ಚಿತ್ರರಂಗದ ನೂರಾರು ಕಲಾವಿದರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದರು. ಇದೀಗ ಅಗಲಿದ ಹಿರಿಯ ನಟಿಯ 11 ದಿನದ ಕಾರ್ಯಕ್ಕೆ ಮಲ್ಲೇಶ್ವರಂ ನಿವಾಸದಲ್ಲಿ ಸಿದ್ಧತೆಗಳು ನಡೆದಿದ್ದು ಭಾರತೀಯ ಚಿತ್ರರಂಗ ಕಂಡ ಮೊದಲ ಲೇಡಿ ಸೂಪರ್ ಸ್ಟಾರ್‌ನ್ನು ಸ್ಮರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಹುಭಾಷಾ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ರಾಜಕಾರಣಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.  ಇದನ್ನೂ ಓದಿ: ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ ಯಶ್‌ ತಾಯಿ ಮಾತು

Share This Article