ಶಿವಮೊಗ್ಗ: ಶಿಕಾರಿಪುರದ (Shikaripura) ಶ್ರೀ ಹುಚ್ಚುರಾಯಸ್ವಾಮಿ (Huccharaya Swami Temple) ರಥೋತ್ಸವದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S. Yediyurappa) ಹಾಗೂ ಅವರ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ ಬ್ರಹ್ಮ ರಥೋತ್ಸವಕ್ಕೆ ಬಿಎಸ್‌ವೈ ಚಾಲನೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ (B.Y Raghavendra), ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕುಟುಂಬಸ್ಥರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ವಿಶೇಷ ಪೂಜೆ ನೆರವೇರಿಸಿ, ಹುಚ್ಚುರಾಯಸ್ವಾಮಿ ರಥವನ್ನು ಕುಟುಂಬಸ್ಥರು ಎಳೆದರು. ಈ ವೇಳೆ ಬಿಎಸ್‌ವೈ ಅಭಿಮಾನಿಗಳು ಜೈಕಾರ ಕೂಗಿದರು. ಇದನ್ನೂ ಓದಿ: ರಾಘವ್ ಚಡ್ಡಾಗೆ AAP ಶಾಕ್ – ರಾಜ್ಯಸಭೆಯಲ್ಲಿ ಉಪನಾಯಕ ಸ್ಥಾನದಿಂದ ವಜಾ
ಬಿ.ವೈ.ರಾಘವೇಂದ್ರ ಅಭಿಮಾನಿಯೊಬ್ಬರು ಇದೇ ವೇಳೆ ಅವರು ಮುಂದಿನ ಕೇಂದ್ರ ಸಚಿವರಾಗಲಿ ಎಂದು ಹರಕೆ ಹೊತ್ತಿದ್ದಾರೆ. ಬಾಳೆಹಣ್ಣಿನ ಮೇಲೆ ಬಿವೈಆರ್ ನೆಕ್ಸ್ಟ್ ಮಿನಿಸ್ಟರ್ ಎಂದು ಬರೆದು ಆಂಜನೇಯನ ತೇರಿಗೆ ಎಸೆದು ಬೇಡಿಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ 5.5 ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹ


