-ಶುರುವಾಗುತ್ತಾ ಹೈಕಮಾಂಡ್-ರಾಜಾಹುಲಿ ಸಂಘರ್ಷ ?
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಸರ್ಕಾರ ರಚನೆ ಆದಾಗಿನಿಂದಲೂ ಕೇಳಿ ಬರುತ್ತಿವೆ. ಪ್ರತಿಯೊಂದು ನಿರ್ಣಯಕ್ಕೂ ಯಡಿಯೂರಪ್ಪನವರು ಹೈಕಮಾಂಡ್‍ನಿಂದ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಇದೀಗ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿಯ ಪಟ್ಟಿಯನ್ನು ತಾವೇ ಅಂತಿಮಗೊಳಿಸಿ ಹೈಕಮಾಂಡ್ ಮತ್ತು ªಪಕ್ಷದ ಮಾನಸ ಪುತ್ರರಿಗೆ ಖಡಕ್ ಸಂದೇಶವನ್ನು ರವಾನಿಸಿದ್ರು ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಉಸ್ತುವಾರಿಗಳ ನೇಮಕದಲ್ಲಿ ಹೈಕಮಾಂಡ್ ಸೂಚನೆ ಗಾಳಿಗೆ ತೂರಿ ಪಟ್ಟಿಯನ್ನು ಯಡಿಯೂರಪ್ಪನವರೇ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಡಿಸಿಎಂಗಳಾದ ಅಶ್ವಥ್ ನಾರಾಯಣ್ ಮತ್ತು ಲಕ್ಷ್ಮಣ ಸವದಿ ಇಬ್ಬರಿಗೂ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡುವ ಹೈಕಮಾಂಡ್ ಗೆ ಶಾಕ್ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಬೆಂಗಳೂರನ್ನು ತನ್ನ ಬಳಿಯೇ ಇಟ್ಟುಕೊಂಡ ಸಿಎಂ
ಅಶ್ವಥ್ ನಾರಾಯಣ ಬೆಂಗಳೂರು ಮತ್ತು ಲಕ್ಷ್ಮಣ ಸವದಿ ಬೆಳಗಾವಿ ಉಸ್ತುವಾರಿ ನೀಡಬೇಕೆಂದಿದ್ದರು. ಬೆಂಗಳೂರು ಉಸ್ತುವಾರಿಗಾಗಿ ಅಶ್ವಥ್ ನಾರಾಯಾಣ ಮತ್ತು ಸಚಿವ ಆರ್.ಅಶೋಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಯಾರು ಅಸಮಾಧಾನಗೊಳ್ಳದಂತೆ ಬೆಂಗಳೂರು ಉಸ್ತುವಾರಿಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಳ್ಳುವ ಮೂಲಕ ಯಾರು ರೆಬೆಲ್ ಆಗದಂತೆ ನೋಡಿಕೊಂಡಿದ್ದಾರೆ.
ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ನಿರ್ದೇಶನದ ಮೇರೆಗೆ ಲಕ್ಷ್ಮಣ ಸವದಿಯವರಿಗೆ ಬೆಳಗಾವಿ ಉಸ್ತುವಾರಿ ನೀಡಿಲ್ಲ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮುಂದಿನ ದಿನಗಳಲ್ಲಿ ಬೆಳಗಾವಿ ಉಸ್ತುವಾರಿ ನೀಡಲು ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದರಿಂದ ತಾತ್ಕಾಲಿಕವಾಗಿ ಜಗದೀಶ್ ಶೆಟ್ಟರ್ ಹೆಗಲಿಗೆ ನೀಡಿದ್ದಾರೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿವೆ.