ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘ಸಮಗ್ರ ಕೃಷಿ ಪದ್ಧತಿ’: ಬಿ.ಸಿ.ಪಾಟೀಲ್

Public TV
1 Min Read

ಬೆಂಗಳೂರು: ‘ಸಮಗ್ರ ಕೃಷಿ ಪದ್ಧತಿ’ ಆತ್ಮಹತ್ಯೆಗೆ ಯತ್ನಿಸಿದ್ದವನ ಬದುಕನ್ನು ಬದಲಾಯಿಸಿ ಮಾದರಿ ರೈತನನ್ನಾಗಿ ಮಾಡಿದೆ. ಇಂತಹ ಮಾದರಿ ರೈತ ‘ದುರ್ಗಪ್ಪ ಅಂಗಡಿ’ ಅವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಖುದ್ದು ಕಚೇರಿಗೆ ಕರೆಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ದುರ್ಗಪ್ಪ ಅಂಗಡಿ ಅವರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಡಿಮೆ ನೀರಿನಲ್ಲಿಯೂ ಕೃಷಿ ಸಾಧನೆ ಮಾಡುವ ಕೋಲಾರದ ರೈತರು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ ಎನ್ನುವುದು ರೈತರನ್ನು ಒಂದಲ್ಲ ಒಂದು ರೀತಿಯಲ್ಲಿ ಕೈಹಿಡಿದೇ ಹಿಡಿಯುತ್ತದೆ. ಸಾಲ ಮಾಡಿದೆನೆಂದು ಕೊರಗುವುದನ್ನು ಬಿಟ್ಟು ಅದರಿಂದ ಹೊರಬಂದು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ‘ದುರ್ಗಪ್ಪ ಅಂಗಡಿ’ ಮಾಡಿ ತೋರಿಸಿದ್ದಾರೆ. ಇಂತಹ ರೈತರು ಎಲ್ಲ ಅನ್ನದಾತರಿಗೂ ಸ್ಫೂರ್ತಿ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕಾಗಿಯೇ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ರೈತನ ಸಾಧನೆ ಅವನಲ್ಲಿನ ಆತ್ಮಸ್ಥೈರ್ಯ ಹೇಗೆ ಪರಿಣಾಮಕಾರಿ ಮತ್ತು ಸ್ಫೂರ್ತಿದಾಯಕವೆನ್ನುವುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ, ತೋರಿಸುತ್ತಿದ್ದಾರೆ ಎಂದು ಹೊಗಳಿದರು.

ಸ್ವಾವಲಂಬಿ ಜೀವನಕ್ಕೆ ಈ ರೈತನೇ ಮಾದರಿ ! ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ | udayavani

ಇಂತಹ ಗಟ್ಟಿಮನಸಿನ ರೈತರೇ ಇತರರಿಗೂ ಮಾದರಿಯಾಗಬಲ್ಲರೆಂಬುದನ್ನು ಇವರು ಹೇಳಿದ್ದಾರೆ. ಅಲ್ಲದೇ ಅನ್ನದಾತನ ಸ್ಫೂರ್ತಿದಾಯಕ ಬದುಕು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗುವುದೆಂದರೆ ಅದು ನಮ್ಮ ರಾಜ್ಯದ ಅನ್ನದಾತ ಎನ್ನುವುದು ಹೆಮ್ಮೆಯೇ ಸರಿ. ಸಾಧನೆಗೆ ಶೈಕ್ಷಣಿಕ ಅರ್ಹತೆಯೊಂದೇ ಮುಖ್ಯವಲ್ಲ. ಸಾಧಿಸುವ ಛಲ, ದಿಟ್ಟ ನಡೆ ಎಂಬುದನ್ನು ದುರ್ಗಪ್ಪ ಅಂಗಡಿ ತೋರಿಸಿ ಕೊಟ್ಟಿದ್ದು, ಇತರ ರೈತರಿಗೂ ಸ್ಫೂರ್ತಿದಾಯಕರಾಗಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

Share This Article
Leave a Comment

Leave a Reply

Your email address will not be published. Required fields are marked *