ನನಗ್ಯಾರು ಬ್ಯಾಗ್ ತೊಗೊಂಡು ಬಾ ಅಂತಾ ಹೇಳಿಲ್ಲ: ಬಿ.ಸಿ.ಪಾಟೀಲ್

Public TV
1 Min Read

ಬೆಂಗಳೂರು: ನನಗೆ ಯಾರು ಬೆಂಗಳೂರಿಗೆ ಬ್ಯಾಗ್ ತೆಗೆದುಕೊಂಡು ಬಾ ಅಂತಾ ಹೇಳಿಲ್ಲ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಸಭೆಗೆ ಆಗಮಿಸಿದ ಬಿ.ಸಿ.ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಯಾವ ಪಕ್ಷಗಳಿಗೂ ಬಹುಮತ ದೊರೆತಿಲ್ಲ, ಹಾಗಾಗಿ ಮೈತ್ರಿ ಸರ್ಕಾರ ಅನಿವಾರ್ಯವಾಗಿದೆ. ಈ ಬಾರಿ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದು, ದೇಶದ ಸಂಸ್ಕೃತಿ, ಭಾರತದ ಸಂವಿಧಾನ ರಕ್ಷಣೆಗಾಗಿ ಮೈತ್ರಿ ಅನಿವಾರ್ಯವಾಗಿದೆ. ಜಾತ್ಯಾತೀತ ಶಕ್ತಿಗಳು ಒಂದಾಗುತ್ತಿರೋದು ಒಳ್ಳೆಯ ಬೆಳವಣಿಗೆ ಅಂತಾ ತಿಳಿಸಿದ್ರು.

ರೆಸಾರ್ಟ್ ಗೆ ಕಾಂಗ್ರೆಸ್ ಹೋಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ್ ಶಾಸಕಾಂಗದ ಸಭೆಗಾಗಿ ನಾನು ಆಗಮಿಸಿದ್ದು, ರೆಸಾರ್ಟ್ ರಾಜಕಾರಣದ ಬಗ್ಗೆ ಯಾವುದೇ ಮಾಹಿತಿಗಳು ನನಗಿಲ್ಲ. ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರು ಬಿಜೆಪಿ ಸೇರ್ತಾರೆ ಎನ್ನುವುದು ಎಲ್ಲಾ ಊಹಾಪೋಹ ಗಾಳಿ ಸುದ್ದಿಗಳು. ಜನ ನಮ್ಮನ್ನು ಕೋಮವಾದಿ ಶಕ್ತಿಗಳ ವಿರುದ್ಧ ಗೆಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ನಾಯಕರು ಮತ್ತೊಂದು ಪಕ್ಷಕ್ಕೆ ಹೋಗುವುದು ಸೂಕ್ತವಲ್ಲ ಅಂತಾ ಸಲಹೆ ನೀಡಿದ್ರು.

ಈ ಹಾವೇರಿ ಜಿಲ್ಲೆಯಲ್ಲಿ ನಾನೊಬ್ಬನೆ ಕಾಂಗ್ರೆಸ್‍ನಿಂದ ಗೆಲುವು ಸಾಧಿಸಿದ್ದೇನೆ. ಸತತವಾಗಿ ಮೂರು ಬಾರಿ ಗೆಲುವು ಸಾಧಿಸುತ್ತಾ ಬಂದಿದ್ದೇನೆ. ಹಾಗಾಗಿ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಅಂತಾ ಆಶಯ ವ್ಯಕ್ತಪಡಿಸಿದರು.

ಬಿ.ಸಿ.ಪಾಟೀಲ್ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದರು. ಬಿಜೆಪಿಯ ಯು.ಬಿ.ಬಣಕಾರ ಅವರನ್ನು 555 ಮತಗಳಿಂದ ಸೋಲಿಸುವ ಮೂಲಕ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿ.ಸಿ.ಪಾಟೀಲ್ 72,461 ಮತ ಪಡೆದ್ರೆ, ಯು.ಬಿ.ಬಣಕಾರ 71,906 ಮತಗಳನ್ನು ಗಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *