ಕಝಾಕಿಸ್ತಾನದಲ್ಲಿ ದುರಂತ – ಪ್ರಯಾಣಿಕ ವಿಮಾನ ಪತನ

Public TV
1 Min Read

ಅಸ್ತಾನಾ: 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಅಜರ್‌ಬೈಜಾನ್‌ವಿಮಾನವೊಂದು ಕಝಾಕಿಸ್ತಾನದ ಅಕ್ಟೌ ನಗರದ ಬಳಿ ಪತನಗೊಂಡಿದೆ.

ವಿಮಾನವು ಅಜೆರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು . ಆದರೆ ಗ್ರೋಜ್ನಿಯಲ್ಲಿ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಗಿತ್ತು.

 

 

ವಿಮಾನ ನಿಲ್ದಾಣದ ಬಳಿಯ ತೆರೆದ ಮೈದಾನದಲ್ಲಿ ವಿಮಾನ ಲ್ಯಾಂಡಿಂಗ್‌ ಆಗಿದೆ. ಲ್ಯಾಂಡ್‌ ಆದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಐವರು ಸಿಬ್ಬಂದಿಯೊಂದಿಗೆ 62 ಪ್ರಯಾಣಿಕರು ವಿಮಾನದಲ್ಲಿದ್ದರು ಮತ್ತು ಕೆಲವು ಜನರು ಅಪಘಾತದಿಂದ ಬದುಕುಳಿದಿದ್ದಾರೆ.

ವಿಮಾನದ ಹಿಂಭಾಗದ ತುದಿಯಲ್ಲಿರುವ ತುರ್ತು ನಿರ್ಗಮನದಿಂದ ಪ್ರಯಾಣಿಕರನ್ನು ಡಿಬೋರ್ಡಿಂಗ್‌ ಮಾಡಲಾಗಿದೆ.

 

 

Share This Article