‘ಅಯುಕ್ತ’ ಟೀಸರ್ ಬಿಡುಗಡೆ ಮಾಡಿದ ಲಹರಿ ವೇಲು

Public TV
1 Min Read

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಅಯುಕ್ತ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಹರಿವೇಲು ಮಾತನಾಡಿ ಇವತ್ತು ತುಂಬಾ ಭಾವುಕನಾಗಿದ್ದೇನೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯವೈಖರಿಯನ್ನು ಮೆಚ್ಚಲೇ ಬೇಕಾಗಿದೆ. ಅನಾಥ ಶವಗಳಿಗೆ ಮುಕ್ತಿ ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇಂತಹವರಿಗೆ ಎಲ್ಲರ ಬೆಂಬಲ ಬೇಕಾಗಿದೆ. ಟೀಸರ್ ನೋಡಿದಾಗ ಹೊಸಬರ ಚಿತ್ರ ಅನಿಸಿವುದಿಲ್ಲ. ಒಳ್ಳೆಯದಾಗಲಿ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ರಚನೆ,ಚಿತ್ರಕಥೆ ಮತ್ತು ನಿರ್ದೇಶನ ಮಾಡಿರುವ ಕನಸು ರಮೇಶ್ ಹೇಳುವಂತೆ ಈ ಹಿಂದೆ ಸುಮಾರು 250 ನಾಟಕಗಳನ್ನು ನಿರ್ದೇಶಿಸಿದ ಅನುಭವವಿದೆ. ಆದ್ದರಿಂದಲೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸುಲಭವಾಯಿತು. ಸಿನಿಮಾದ ಕುರಿತು ಹೇಳುವುದಾದರೆ ಸಂಪಾದನೆಗೋಸ್ಕರ ಪದವಿ ಮಾಡಬೇಡಿ. ಜ್ಞಾನಾರ್ಜನೆಗೋಸ್ಕರ ಡಿಗ್ರಿ ಮಾಡುವುದು ಒಳಿತು. ಪೋಷಕರು ತಮ್ಮ ಧೋರಣೆಯನ್ನು ನೋಡದೆ ಮಕ್ಕಳು ಇಷ್ಟಪಡುವಂತ ಕೆಲಸಕ್ಕೆ ಸ್ವಾತಂತ್ರ ಕೊಡಬೇಕು. ಅದನ್ನು ಅನುಸರಿಸದೆ ಬಲವಂತ ಮಾಡಿದಾಗ, ಮಕ್ಕಳು ಯಾವ ರೀತಿ ದಿಕ್ಕು ತಪ್ಪುತ್ತಾರೆ. ಕೊನೆಗೆ ಏನಾಗುತ್ತಾರೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಪ್ರೀತಿಯೊಂದಿಗೆ ಹೇಳಲಾಗಿದೆ. ನೂರಾರು ತಿರುವುಗಳು ಇರಲಿದ್ದು ಒಂದೊಂದು ತಿರುವುಗಳಿಗೂ ಕಥೆ ಇರಲಿದೆ. ಮಂಡ್ಯ, ಕಿರುಗಾವಲು. ಮಳವಳ್ಳಿ, ಬೆಳಕವಾಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾದ್ಯಮದ ಸಹಕಾರ ಬೇಕೆಂದು ಕೋರಿದರು. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

ಫಯುಸುಪಿಯಾನ್, ಅದ್ದೂರಿಬಸವ, ರಮೇಶ್, ಜಾನ್ಸನ್, ರುತ್ವಿಕಾ, ಸೌಂದರ್ಯಗೌಡ, ಚನ್ನಬಸಪ್ಪ ಮುಂತಾದವರು ಪಾತ್ರದ ಪರಿಚಯ ಮಾಡಿಕೊಂಡು ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಬಾಲಾಜಿ ಕ್ರಿಯೇಶನ್ಸ್ ಅಡಿಯಲ್ಲಿ ವಿಶ್ವಾಸ್ ಆರ್.ಗಂಗಡ್ಕರ್ ನಿರ್ಮಾಣ ಮಾಡಿದ್ದಾರೆ. ಸಂಗೀತ ವಿಲಿಯಂದೃತ್, ಛಾಯಾಗ್ರಹಣ ಅರಸಿಕೆರೆ ದೀಪು, ಸಂಕಲನ ನಿಶಿತ್‌ ಪೂಜಾರಿ ಅವರದಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *