ಅಯೋಧ್ಯೆ ವಿವಾದವನ್ನು ಸುಪ್ರೀಂಕೋರ್ಟ್ ಬಗೆಹರಿಸಲು ಸಾಧ್ಯವೇ ಇಲ್ಲ: ಸಂತೋಷ್ ಹೆಗ್ಡೆ

Public TV
1 Min Read

ಬೆಂಗಳೂರು: ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಲು ಸಾಧ್ಯವೇ ಇಲ್ಲವೆಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟಿದ್ದಾರೆ.

ಭಾನುವಾರ ನಗರದ ಮೆಟ್ರೋ ರಂಗೋಲಿಯಲ್ಲಿ ಛಾಯಗ್ರಾಹಕ ಸುಧೀರ್ ಶೆಟ್ಟಿಯವರ ಕ್ಯಾಮೆರಾದಲ್ಲಿ ಕಂಡ ಅಯೋಧ್ಯೆ ಕುರಿತಾದ ಛಾವಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್‍ನಿಂದ ಬಗೆಹರಿಸಲು ಸಾಧ್ಯವೇ ಇಲ್ಲ. ಸರ್ವೋಚ್ಛ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದ ನಂತರ ಕೋಮು ಸೌಹಾರ್ದ ಉಳಿಯುವುದು ಅನುಮಾನಸ್ಪದವಾಗಿದೆ. ಈ ಸಮಸ್ಯೆಯನ್ನು ಅಲ್ಲಿನ ಸ್ಥಳಿಯರು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅಯೋಧ್ಯೆ ವಿಚಾರಕ್ಕೆ ಹೊರಗಿನವರ ಹಸ್ತಕ್ಷೇಪ ಹೆಚ್ಚಾಗಿದೆ. ರಾಜಕೀಯ ಹಿತಾಸಕ್ತಿಯಿಂದಲೇ ಅದು ದೊಡ್ಡ ಮಟ್ಟದ ವಿವಾದವಾಗಿ ಬೆಳೆದಿದೆ. ಕೇವಲ ಸುಪ್ರೀಂ ತೀರ್ಪಿನ ಮೂಲಕವೇ ಎಲ್ಲವನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಸಂತೋಷ್ ಹೆಗ್ಡೆ ಅಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಪ್ರತಿಕ್ರಿಯಿಸಿ, ಅಯೋಧ್ಯೆ ವಿವಾದವನ್ನು ಬಿಜೆಪಿಯವರು ರಾಜಕೀಯ ದಾಳವನ್ನಾಗಿಸಿಕೊಂಡಿದ್ದಾರೆ. ಅವರಿಗೆ ರಾಮ ಬೇಕಾಗಿಲ್ಲ. ಒಂದು ವೇಳೆ ದೇವರು ಬೇಕಾಗಿದ್ದರೆ ಈ ಹೊತ್ತಿಗೆ ಅಯೋಧ್ಯೆಯನ್ನು ಅಭಿವೃದ್ಧಿ ಮಾಡುತ್ತಿದ್ದರು. ಆದರೆ ಅವರಿಗೆ ಗಲಾಟೆಯಾಗೋದು ಅಷ್ಟೆ ಬೇಕಾಗಿದೆ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದು ದೊಡ್ಡ ತಪ್ಪು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಛಾಯಗ್ರಾಹಕ ಸುಧೀರ್ ಶೆಟ್ಟಿಯವರ ಕ್ಯಾಮೆರಾ ಕಣ್ಣಲ್ಲಿ ರಾಮಜನ್ಮ ಭೂಮಿಯ ಸತ್ಯ ಪ್ರದರ್ಶನವಾಗಿದ್ದು, ಅಯೋಧ್ಯ ಕುರಿತಾದ ಸ್ಫೋಟಕ ಮಾಹಿತಿಗಳು ಛಾಯಚಿತ್ರಗಳ ಮೂಲಕ ಹೊರ ಬಂದಿವೆ. ಛಾಯಚಿತ್ರ ಪ್ರದರ್ಶನದಲ್ಲಿ ರಾಮಜನ್ಮ ಭೂಮಿಯ ಸ್ಥಿತಿ-ಗತಿಗಳ ಛಾಯಚಿತ್ರ ಹಾಗೂ ವಿಡಿಯೋವನ್ನು ಅನಾವರಣಗೊಳಿಸಿದ್ದಾರೆ.

ಅಯೋಧ್ಯಾ ನಗರಿಯಲ್ಲಿರುವ ಸ್ಥಳೀಯರಿಗೆ ಈ ವಿವಾದ ಬೇಕಾಗಿಲ್ಲ. ವಿವಾದದ ದಳ್ಳುರಿಯಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ. ಅಲ್ಲಿನ ಮುಸ್ಲಿಮರು ಹಾಗೂ ಹಿಂದೂಗಳಿಗೆ ವಿವಾದವನ್ನು ಬಗೆಹರಿಸುವ ಆಸೆಯಿದೆ. ಆದರೆ ರಾಜಕೀಯ ನಾಯಕರಿಗೆ ವಿವಾದ ಜೀವಂತವಾಗಿದ್ದರೇ ಒಳ್ಳೆಯದು ಎನ್ನುವ ಭಾವನೆಯನ್ನು ಛಾಯಚಿತ್ರದ ಮೂಲಕ ಬಿಚ್ಚಿಟ್ಟಿದ್ದಾರೆ.

ಆಯೋಧ್ಯೆ ವಿವಾದ ಸಂಬಂಧ ಸಲ್ಲಕೆಯಾಗಿರುವ ಅರ್ಜಿ ವಿಚಾರಣೆ ಅಕ್ಟೋಬರ್ 29 ರಿಂದ ಆರಂಭವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Share This Article
Leave a Comment

Leave a Reply

Your email address will not be published. Required fields are marked *