ಕಣದಿಂದ ಹಿಂದೆ ಸರಿಯಬೇಡಿ – ಈಶ್ವರಪ್ಪಗೆ ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನ ಗೋಪಾಲ್ ಜೀ ಬೆಂಬಲ

Public TV
1 Min Read

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಶಿವಮೊಗ್ಗ  (Shivamogga) ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ರಾಮಮಂದಿರ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಮೂಲದ ಗೋಪಾಲ್ ಜೀಯವರು ಕರೆ ಮಾಡಿ ಮಾತಾಡಿದ್ದಾರೆ. ಈ ವೇಳೆ ಗೋಪಾಲ್ ಜೀಯವರು (Gopal Ji) ಕಣದಿಂದ ಹಿಂದೆ ಸರಿ ಬೇಡಿ ಎಂಬ ಸಲಹೆ ನೀಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡಿದ ಬಳಿಕ ದೇವಾಲಯಗಳಿಗೆ ಭೇಟಿ ಕೊಡುತ್ತಿರುವ ಈಶ್ವರಪ್ಪ, ಇಂದು ಬಿಳಕಿ ಮಠಕ್ಕೆ ತೆರಳಿದ್ದಾರೆ. ಈ ವೇಳೆ ಗೋಪಾಲ್ ಜೀಯವರ ಕರೆ ಬಂದಿದೆ. ಈ ವೇಳೆ, ಮಠಾಧೀಶರು ಹಾಗೂ ಹಿಂದುತ್ವದ ಕಾರ್ಯಕರ್ತರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾವೇರಿ ಬೊಮ್ಮಾಯಿ ಸೋಲುತ್ತಾರೆ. ಇಲ್ಲಿ ರಾಘವೇಂದ್ರ ಸೋಲುತ್ತಾನೆ. ಯಡಿಯೂರಪ್ಪ ವಿರುದ್ಧ ಸಾಕಷ್ಟು ವಿರೋಧವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಗೋಪಾಲ್‌ ಜೀಯವರು ಈಶ್ವರಪ್ಪ ಸ್ಪರ್ಧೆಗೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್‌ ಸ್ಪರ್ಧೆ?

ಬಳಿಕ ಈಶ್ವರಪ್ಪನವರು, ಗೆದ್ದು ಬಂದು ನೀವು ಇರುವ ಜಾಗ ಅಯೋಧ್ಯೆಗೆ ಬಂದು ಪ್ರಭು ಶ್ರೀರಾಮಚಂದ್ರನ ಅಶೀರ್ವಾದ ಪಡೆಯುತ್ತೇನೆ. ನಾನು ಇಂದು ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ಭಾಗವಹಿಸಿದರೆ ಮೋದಿಯವರು ನನ್ನ ಎದುರು ರಾಘವೇಂದ್ರಗೆ ಮತ ಕೇಳ್ತಾರೆ. ನಾನು ಏನು ಮಾಡೋದು ಆಗ? ನಾನು ಆ ಕಾರ್ಯಕ್ರಮಕ್ಕೆ ತೊಂದರೆ ಕೊಡ್ಲಾ? ಗೆದ್ದು, ಬಳಿಕ ಮೋದಿಯವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ – ಕೂಡಲೇ ಜೈಲಾಧಿಕಾರಿಗಳ ಮುಂದೆ ಹಾಜರಾಗುವಂತೆ ಸುಪ್ರೀಂ ಆದೇಶ

Share This Article