ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಗೆ ಕ್ಷಣಗಣನೆ
ಅಯೋಧ್ಯೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ
ಕೆಲವೇ ನಿಮಿಷಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಮೋದಿ
ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್
ಅಯೋಧ್ಯೆಯಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಮತ್ತು ನಟ ವಿವೇಕ್ ಒಬೆರಾಯ್
ಅಯೋಧ್ಯೆಗೆ ಬಂದಿಳಿದ ಮೋದಿ
ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಆಗಮಿಸಿದ್ದಾರೆ.
ರಾಮನೂರು ಅಯೋಧ್ಯೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್
ಇತಿಹಾಸದ ಪುಟಗಳಲ್ಲಿ ಬರೆದಿಡುವ ದಿನ – ಅಯೋಧ್ಯೆಯಲ್ಲಿ ಆಕಾಶ್ ಅಂಬಾನಿ
ಭೂಮಿಯ ಮೇಲಿರುವ ಅತ್ಯಂತ ಅದೃಷ್ಟಶಾಲಿ ನಾನೇ – ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್
ʻರಾಮ್ ಸಿಯಾ ರಾಮ್ʼ – ಶ್ರೀರಾಮನಿಗೆ ಖ್ಯಾತ ಗಾಯಕ ಸೋನು ನಿಗಮ್‌ರಿಂದ ಗಾನ ನಮನ
ಅಯೋಧ್ಯೆಯಲ್ಲಿ ರಿಯಲಯನ್ಸ್ ಇಂಡ್ರಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ & ಪತ್ನಿ ನಿತಾ ಅಂಬಾನಿ
ಉದ್ಘಾಟನೆಗೆ ಸಿದ್ಧವಾಗಿರುವ ಭವ್ಯ ರಾಮಮಂದಿರ
ಅಯೋಧ್ಯೆ ರಾಮಮಂದಿರಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಪ್ರಧಾನಿ ಮೋದಿ
ಅಯೋಧ್ಯೆ ರಾಮಮಂದಿರ ಗರ್ಭಗುಡಿಯಲ್ಲಿ ʻನಮೋʼ ಪೂಜೆ
ಇಡೀ ವಿಶ್ವವೇ ಎದುರು ನೋಡುತ್ತಿದ್ದ ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ವಿಧಿವಿಧಾನ ಆರಂಭಗೊಂಡಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಭಗುಡಿಯಲ್ಲಿ ಕುಳಿತು ವಿರಾಜಮಾನರಾಗಿರುವ ಶ್ರೀರಾಮನಿಗೆ ಪೂಜಾ ಕೈಂಕರ್ಯಗಳನ್ನ ನೇರವೇರಿಸುತ್ತಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದಾರೆ.