ಯುಪಿಯಲ್ಲಿ ಬೀದರ್‌ ಟಿಟಿ ಅಪಘಾತ – ಯುವತಿ ಸಾವು, ಸಾವಿನ ಸಂಖ್ಯೆ 8ಕ್ಕೆ ಏರಿಕೆ

Public TV
1 Min Read

ಬೀದರ್/ಲಕ್ನೋ: ಉತ್ತರ ಪ್ರದೇಶದ ಖೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 7 ಜನ ಮೃತಪಟ್ಟಿದ್ದು, ತಡರಾತ್ರಿ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಈ ಮೂಲಕ ಅಪಘಾತಕ್ಕೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಶಿವಾನಿ ಮೃತ ದುರ್ದೈವಿ. ಅಯೋಧ್ಯೆಗೆ ಟೆಂಪೋ ಟ್ರಾವೆಲರ್‌ನಲ್ಲಿ ಬೀದರ್‌ನ 16 ಜನರು ಪ್ರಯಾಣ ಬೆಳೆಸುತ್ತಿದ್ದರು. ಈ ಟೆಂಪೋ ಟ್ರಾವೆಲರ್‌ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಎದುರಿನ ಲೇನ್‍ಗೆ ಪ್ರವೇಶಿಸಿದೆ. ಈ ವೇಳೆ ಟೆಂಪೋ ಟ್ರಾವೆಲರ್‌ ಮತ್ತು ಟ್ರಕ್ ನಡುವೆ ಭೀರಕ ಅಪಘಾತ ಸಂಭವಿಸಿದ್ದು, ಮೂವರು ಮಹಿಳೆಯರು ಸೇರಿದಂತೆ 7 ಜನ ಮೃತಪಟ್ಟಿದ್ದರು. 9 ಮಂದಿಗೆ ಗಂಭೀರ ಗಾಯವಾಗಿತ್ತು. ಆದರೆ ಈಗ ಯುವತಿ ಶಿವಾನಿ ಸಹ ಮೃತಪಟ್ಟಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ – ಸಂತ್ರಸ್ತರ ನೆರವಿಗೆ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರಪ್ರದೇಶದ ಸಿಎಂ ಯೋಗಿ ಅವರಿಗೆ ಮನವಿ ಮಾಡಿದ ಹಿನ್ನೆಲೆ ಬೀದರ್‍ಗೆ ಇಂದು ಮೃತದೇಹಗಳು ರವಾನೆವಾಗುತ್ತಿವೆ. ಇಂದು ಸಂಜೆ 4 ಗಂಟೆಗೆ ಮೃತದೇಹಗಳು ಬೀದರ್ ತಲುಪಲಿದ್ದು. ಮಧ್ಯಾಹ್ನ 1 ಗಂಟೆಗೆ ಲಕ್ನೋದಿಂದ ವಿಮಾನದ ಮೂಲಕ ಹೈದ್ರಾಬಾದ್‍ಗೆ ಮೃತದೇಹಗಳು ತಲುಪಿಲಿವೆ. ಇದನ್ನೂ ಓದಿ: ಕಾಲೇಜಿಗೆ ಟೋಪಿ ಹಾಕಿ ಬಂದ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಿನ್ಸಿಪಾಲ್ ಸೇರಿ 7 ಮಂದಿ ಮೇಲೆ FIR

ಹೈದ್ರಾಬಾದ್‍ನಿಂದ ಆಂಬ್ಯುಲೆನ್ಸ್ ಮೂಲಕ ಬೀದರ್‍ಗೆ ತೆಗೆದುಕೊಂಡು ಬಂದು ಬಳಿಕ ಬೀದರ್ ತಾಲೂಕಿನ ಸುಲ್ತಾನಪುರ ಸ್ವಗ್ರಾಮದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *