ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಡಿಎಂ ಶವವಾಗಿ ಪತ್ತೆ

Public TV
1 Min Read

ಲಕ್ನೋ: ಅಯೋಧ್ಯೆಯ (Ayodhya) ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ಗುರುವಾರ ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುರ್ಜಿತ್ ಸಿಂಗ್ (58) ಕೊತ್ವಾಲಿ ನಗರದ ಸಿವಿಲ್ ಲೈನ್ಸ್ ಪ್ರದೇಶದ ಸುರ್ಸಾರಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಿಂಗ್ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಾಗಾಗಿ ಮೆದುಳು ರಕ್ತಸ್ರಾವದಿಂದ ಸಾವಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಜೋತುಬಿದ್ದ ವಿದ್ಯುತ್ ವೈರ್‌ಗೆ ಇಬ್ಬರು ರೈತರು ಬಲಿ – ಸೆಸ್ಕ್ ಜೂನಿಯರ್ ಎಂಜಿನಿಯರ್, ಲೈನ್‌ಮ್ಯಾನ್ ಸಸ್ಪೆಂಡ್

ಘಟನೆಯ ಬಗ್ಗೆ ಮಾಹಿತಿ ಪಡೆದ ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್, ಡಿಎಂ ಚಂದ್ರ ವಿಜಯ್ ಸಿಂಗ್, ಸಂಸದ ಅವಧೇಶ್ ಪ್ರಸಾದ್, ಮೇಯರ್ ಗಿರೀಶ್ಪತಿ ತ್ರಿಪಾಠಿ, ಅಯೋಧ್ಯೆ ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಡಿಎಂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೆ ಘಟನೆ ಬಗ್ಗೆ ಕುಟುಂಬ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: Nvidia ದಲ್ಲಿ ವಿದ್ಯೆ ಇದೆ, ಇದರರ್ಥ ಭಾರತದಲ್ಲಿ ಜ್ಞಾನ: ಅಂಬಾನಿಯ ಮಾತಿಗೆ ಜೆನ್ಸನ್‌ ಹುವಾಂಗ್‌ ಚಪ್ಪಾಳೆ

ಸುರ್ಜೀತ್ ಸಿಂಗ್ ಅವರು ಪತ್ನಿ, ಮಗ ಮತ್ತು ಸೊಸೆಯನ್ನು ಅಗಲಿದ್ದಾರೆ. ವರದಿಗಳ ಪ್ರಕಾರ ಸಿಂಗ್ ಮೃತದೇಹ ಪತ್ತೆಯಾದ ಕೋಣೆಯ ಸುತ್ತ ನೆಲದ ಮೇಲೆ ರಕ್ತ ಕಂಡುಬಂದಿದೆ. ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವೂ ಆಗಮಿಸಿದೆ. ಮೂಲತಃ ಫರೂಕಾಬಾದ್‌ನವರಾದ ಸಿಂಗ್ ಅಯೋಧ್ಯೆಗೆ ನೇಮಕಗೊಳ್ಳುವ ಮೊದಲು ಜೌನ್‌ಪುರದಲ್ಲಿದ್ದರು. ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ| ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ದ ಕಾರು

Share This Article