`ಅವತಾರ್ 2′ ಚಿತ್ರಕ್ಕೆ ಸಂಕಷ್ಟ: ಸಿನಿಮಾ ಲೀಕ್

Public TV
1 Min Read

ವಿಶ್ವದ ಎಲ್ಲಾ ಕಡೆ `ಅವತಾರ್ 2′ (Avatara 2) ಸಿನಿಮಾ ಅಬ್ಬರ ಜೋರಾಗಿದೆ. ಹೀಗಿರುವಾಗ ರಿಲೀಸ್ ಆಗುವ ಮೊದಲೇ `ಅವತಾರ್ 2′ ಚಿತ್ರ ಪೈರಸಿ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸಿನಿಮಾ ಸದ್ದು ಮಾಡ್ತಿದೆ.

 

View this post on Instagram

 

A post shared by Avatar (@avatar)

ಕನ್ನಡ ಚಿತ್ರರಂಗದಿಂದ (Kannada Film Industry) ಹಿಡಿದು ಹಾಲಿವುಡ್‌ವರೆಗೂ (Hollywood) ಸಿನಿಮಾಗಳಿಗೆ ಪೈರೆಸಿ ಕಾಟವಿದೆ. ಇದೀಗ `ಅವತಾರ್ 2′ ಚಿತ್ರವನ್ನು ಟೆಲಿಗ್ರಾಂ ಸೇರಿದಂತೆ ಹಲವು ಕಡೆ ಕಿಡಿಗೇಡಿಗಳು ಸಿನಿಮಾ ಅಪ್‌ಲೋಡ್ ಮಾಡಿದ್ದಾರೆ. ಇನ್ನೂ ಡಿ.6ರಂದು ಲಂಡನ್‌ನಲ್ಲಿ (London) ಈ ಮೊದಲೇ ರಿಲೀಸ್ ಆಗಿತ್ತು. ಕಳೆದ ಒಂದು ವಾರದಿಂದ ವಿದೇಶದಲ್ಲಿ ವಿಶೇಷ ಪ್ರದರ್ಶನ ಕೂಡ ಇತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಸಿನಿಮಾ ಶೂಟ್ ಮಾಡಿ, ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾರಾ ಲೋಕೇಶ್ ಭೇಟಿಯಾದ ನಟ ಯಶ್

 

View this post on Instagram

 

A post shared by Avatar (@avatar)

ಇನ್ನೂ ಭಾರತದಲ್ಲಿ ಇಂದು ಸಿನಿಮಾ ತೆರೆಕಂಡಿದ್ದು, ಹಾಲಿವುಡ್‌ನ `ಅವತಾರ್ 2′ ನೋಡಲು ಕಾತರದಿಂದ ಕಾಯುತ್ತಿದ್ದರು. ಈ ಬೆನ್ನಲ್ಲೇ ಸಿನಿಮಾ ಪೈರಸಿ ಆಗಿರೋದು ಚಿತ್ರತಂಡಕ್ಕೆ ಮತ್ತು ವಿತರಕರಿಗೆ ದೊಡ್ಡ ತಲೆನೋವಾಗಿದೆ. ಭಾರತದಲ್ಲಿ ಇಂಗ್ಲೀಷ್ ಸೇರಿದಂತೆ ಆರು ಭಾಷೆಗಳಲ್ಲಿ `ಅವತಾರ್ 2′ ಚಿತ್ರ ತೆರೆಗೆ ಅಪ್ಪಳಿಸಿದೆ.

 

View this post on Instagram

 

A post shared by Avatar (@avatar)

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ ಪೈರಸಿ ಕಾಟದ ಮಧ್ಯೆ ಅವತಾರ್ 2 ಅದೆಷ್ಟರ ಮಟ್ಟಿಗೆ ಕಲೆಕ್ಷನ್ ಮಾಡುತ್ತದೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *