ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

Public TV
1 Min Read

ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಕಂಗೆಟ್ಟು ಸ್ವಂತ ವಾಹನಗಳಿಗೆ ಗುಡ್ ಬಾಯ್ ಹೇಳಿ ಆಟೋಗಳ ಮೊರೆಹೋಗಿದ್ದ ಪ್ರಯಾಣಿಕರಿಗೆ ನಾಳೆಯಿಂದ ಆಟೋದವರು ದರ ಏರಿಕೆಯ ಶಾಕ್ ನೀಡಲಿದ್ದಾರೆ.

ಈ ಹಿಂದೆ ಕನಿಷ್ಠ ಚಾರ್ಜ್ 25 ರೂ. ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರೂ. ಸೇರ್ಪಡೆಯಾಗಲಿದ್ದು, ನಾಳೆಯಿಂದ ಮಿನಿಮಮ್ ಚಾರ್ಜಸ್ 30 ರೂ.ಗೆ ಏರಿಕೆಯಾಗಲಿದೆ. ಜೊತೆಗೆ ಹಿಂದೆ ಒಂದು ಕಿ.ಮೀಗೆ 13 ರೂ. ಮೀಟರ್ ಮುಖಾಂತರ ಪಡೆದುಕೊಳ್ಳಲಾಗುತ್ತಿದ್ದು, ಸದ್ಯ ಮೀಟರ್ ದರವನ್ನು ಏರಿಕೆ ಮಾಡಿದ್ದು, ಒಂದು ಕಿಮೀಗೆ ಇನ್ಮುಂದೆ 15 ರೂ. ಆಗಲಿದೆ.

ಕಳೆದ ಕೆಲ ದಿನಗಳಿಂದಲೂ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಲೆ ಇದೆ. ಇಂಧನ, ಆಟೋ ಗ್ಯಾಸ್, ಆಟೋ ಬಿಡಿ ಭಾಗಗಳು, ಇನ್ಸೂರೆನ್ಸ್ ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರಿದೆ.

ಇದರಿಂದಾಗಿ ಆಟೋ ಚಾಲಕರು ಜೀವನ ನಡೆಸಬೇಕಾದರೆ ಬಹಳ ಕಷ್ಟವಾಗಿತ್ತು. ಇದರಿಂದ ಕಂಗೆಟ್ಟು ಕುಳಿತಿದ್ದ ಆಟೋ ಚಾಲಕರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಇದನ್ನೂ ಓದಿ: ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

ಇದೇ ವೇಳೆ ಬೆಲೆ ಏರಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನುಳಿದವರು ತೊಂದರೆಯಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪರಿಷ್ಕೃತ ಆಟೋ ದರ :  ಮೊದಲ 2 ಕಿಮೀಗೆ 30 ರೂಪಾಯಿ ನಿಗದಿಗೊಳಿಸಿದ್ದು, ನಂತರದ ಪ್ರತಿ ಕಿಮೀಗೆ 15 ರೂಪಾಯಿ ನೀಡಬೇಕು.  ಮೊದಲ ಐದು ನಿಮಿಷ ಉಚಿತ ಕಾಯುತ್ತಾರೆ. ನಂತರದಲ್ಲಿ ಪ್ರತಿ ನಿಮಿಷಕ್ಕೆ 5 ರೂ. ನೀಡಬೇಕಾಗುತ್ತದೆ.

20 ಕೆಜಿ ವರೆಗೆ ಲಗೇಜ್ ಸಾಗಣೆ ಉಚಿತವಾಗಿದ್ದು, 21 ಕೆಜಿಯಿಂದ 50 ಕೆಜಿವರೆಗೆ 5 ರೂ. ದರ ನಿಗದಿಗೊಳಿಸಲಾಗಿದೆ. ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15) ಪಡೆಯಲು ಅವಕಾಶ ನೀಡಲಾಗಿದೆ.ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿ ನಮ್ಮ ದೇಶದಲ್ಲೂ ಇರಬಹುದು: ಡಾ.ಸಿ.ಎಸ್ ಮಂಜುನಾಥ್

Share This Article
Leave a Comment

Leave a Reply

Your email address will not be published. Required fields are marked *