ಆಟೋರಿಕ್ಷಾ ಬಾವಿಗೆ ಬಿದ್ದು 6 ಮಕ್ಕಳು ಸೇರಿ 10 ಜನ ಜಲಸಮಾಧಿ

Public TV
1 Min Read

ಹೈದರಾಬಾದ್: ಆಟೋರಿಕ್ಷಾ ಬಾವಿಗೆ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮುಪ್ಕಾಲ್ ಗ್ರಾಮದಲ್ಲಿ ಭಾನುವಾರದಂದು ನಡೆದಿದೆ.

ಆಟೋರಿಕ್ಷಾ ಬೈಪಾಸ್ ರಸ್ತೆಯ ಮೂಲಕ ಮುಪ್ಕಾಲ್ ನಿಂದ ಮೆಂಡೋರಾಕ್ಕೆ ತೆರಳುತ್ತಿತ್ತು. ಸುಮಾರು 14 ಪ್ರಾಯಾಣಿಕರು ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಓವರ್ ಲೋಡ್ ಆಗಿದ್ದ ಆಟೋ ಮುಪ್ಕಾಲ್ ಗ್ರಾಮಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ತೆರೆದ ಬಾವಿಗೆ ಬಿದ್ದಿದೆ. ಪರಿಣಾಮ ಆಟೋದಲ್ಲಿದ್ದ 14 ಮಂದಿಯಲ್ಲಿ 6 ಮಕ್ಕಳು ಹಾಗೂ 4 ಜನ ಮಹಿಳೆಯರು ಜಲಸಮಾಧಿ ಆಗಿದ್ದಾರೆ. ಇನ್ನು ಉಳಿದವರು ಈಜಿ ಮೇಲೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಆಟೋದಲ್ಲಿ ಮಿತಿ ಮೀರಿ ಜನರನ್ನು ತುಂಬಿಸಿಕೊಂಡು ಹೋಗಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *