ಬೆಂಗ್ಳೂರಿನ ಹಾಟ್‌ಸ್ಪಾಟ್‌ನಲ್ಲಿ ಪ್ರಿಪೇಯ್ಡ್ ಕೌಂಟರ್ – ಆಟೋ ಚಾಲಕರ ಮಾಸ್ಟರ್ ಪ್ಲ್ಯಾನ್‌

Public TV
2 Min Read

ಬೆಂಗಳೂರು: ಓಲಾ (Ola), ಉಬರ್ (Uber) ಆಟೋ ಸ್ಥಗಿತಕ್ಕೆ ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಇನ್ನೊಂದೆಡೆ ಓಲಾ, ಉಬರ್ ಆಟೋಗಳ ಮೂಲಕ ಲೂಟಿ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಗಿದೆ. ಈ ಮಧ್ಯೆ ಆ್ಯಪ್ ಆಧಾರಿತ ಆಟೋ ಇಲ್ಲದೇ ಹೋದ್ರೇ ಮುಂದೇನು ಅನ್ನೋದಕ್ಕೆ ಬೆಂಗಳೂರಿನ ಆಟೋ ಚಾಲಕರೇ (Auto Drivers) ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ. ಸರ್ಕಾರಕ್ಕೂ ಈ ಕುರಿತು ಮನವಿ ಮಾಡಿದ್ದಾರೆ.

ಪ್ರೀಪೇಯ್ಡ್ ಕೌಂಟರ್ ಪರಿಹಾರ:
ಓಲಾ, ಉಬರ್ ಆಟೋ ಕಿರಿಕಿರಿ ತಾರಕಕ್ಕೇರಿದೆ. ಈ ಮಧ್ಯೆ ಸಾರಿಗೆ ಇಲಾಖೆ ದಿನಕ್ಕೊಂದು ಗೊಂದಲದ ಹೇಳಿಕೆ ಕೊಟ್ಟು ಜನರನ್ನು ದಾರಿತಪ್ಪಿಸುತ್ತಿದೆ. ಈಗ ಇಂದಿನಿಂದ ಓಲಾ, ಉಬರ್ ಆಟೋ (Auto Rickshaw) ಸಂಪೂರ್ಣ ಸ್ಥಗಿತವಾಗಬೇಕು. ಜನ ಇದನ್ನು ಬಳಕೆ ಮಾಡಬಾರದು ಅಂತಾ ಹೇಳಿದ್ದಾರೆ. ಹೀಗಾಗಿ ಆಟೋ ಚಾಲಕರು ಸರ್ಕಾರವೇ ಒಂದು ಆ್ಯಪ್ ನಿರ್ವಹಣೆ ಮಾಡಲಿ ಅದು ಸಾಧ್ಯವಾಗದೇ ಹೋದರೆ ಬೆಂಗಳೂರಿನಲ್ಲಿ ಹೆಚ್ಚು ಜನದಟ್ಟಣೆ ಇರುವ ಮಾಲ್, ಮೆಟ್ರೋ ಸ್ಟೇಷನ್ (Metro Stations), ಶಾಪಿಂಗ್ ಹಾಟ್ ಸ್ಪಾಟ್ ಬಸ್ ಸ್ಟ್ಯಾಂಡ್‌  ಕಡೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಿಪೇಯ್ಡ್ ಆಟೋ ಸೆಂಟರ್ (Prepaid Auto Rickshaw Counter) ತೆರೆಯಲು ಸರ್ಕಾರಕ್ಕೆ (Government Of Karnataka) ಮನವಿ ಮಾಡಿದ್ದಾರೆ.

ಖುದ್ದು ಚಾಲಕರೇ ಪತ್ರ ಬರೆದಿದ್ದು ಸರ್ಕಾರ, ಪೊಲೀಸ್ ಇಲಾಖೆ (Police Department) ಇದಕ್ಕೆ ಅವಕಾಶ ಕೊಟ್ಟರೆ ನಗರದಲ್ಲಿ ಸಾರಿಗೆ ಇಲಾಖೆ ನಿಗದಿಪಡಿಸಿದ ದರದಲ್ಲಿಯೇ ಆಟೋ ಓಡಿಸಬಹುದು. ಪ್ರಯಾಣಿಕರಿಗೂ ಇದರಿಂದ ಹೊರೆ ಕಡಿಮೆಯಾಗಲಿದೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಡಿಜೆ ಹಾಕಿ ಹಿಂದೂ ವಿರೋಧಿ ಘೋಷಣೆ- ಮಚ್ಚು, ಲಾಂಗ್, ತಲ್ವಾರ್ ಬೀಸಿ ಪುಂಡಾಟ

ಪ್ರಯಾಣಿಕರೊಂದಿಗಿನ ವರ್ತನೆ ಬಗ್ಗೆ ಟ್ರೈನಿಂಗ್‌:
ಇನ್ನು ಆಟೋ ಚಾಲಕರು ಪ್ರಯಾಣಿಕರ ಜೊತೆ ಯಾವ ರೀತಿ ವರ್ತಿಸಬೇಕು? ಸಾರಿಗೆ ಇಲಾಖೆ ಫಿಕ್ಸ್ ಮಾಡಿದ ದರದಲ್ಲಿ ಆಟೋ ಓಡಿಸಬೇಕು, ಪ್ರಯಾಣಿಕರು ಕರೆದಾಗ ನಿರಾಕರಣೆ ಮಾಡಬಾರದು, ಹಿಗ್ಗಾಮುಗ್ಗ ದರ ಹೇಳಬಾರದು ಹೀಗೆ ಆಟೋ ಚಾಲಕರ ಸಂಘದಿಂದ ಈ ಬಗ್ಗೆ ಎಲ್ಲಾ ಚಾಲಕರಿಗೆ ಕಾರ್ಯಾಗಾರ ನಡೆಸಲು ನಿರ್ಧಾರ ಮಾಡಲಾಗಿದೆ.

ಕೆಲವೊಮ್ಮೆ ಆಟೋ ಚಾಲಕರ ವರ್ತನೆಯಿಂದಲೇ ಇಂತಹ ಆ್ಯಪ್‌ಗಳು (Applications) ಜನರಿಗೆ ಹತ್ತಿರವಾಗಿದೆ. ಹೀಗಾಗಿ ಕಡಿಮೆ ದುಡ್ಡಿನಲ್ಲಿ ಜನರಿಗೆ ಆಟೋ ಸೇವೆ ಸಿಗಬೇಕಾದ್ರೇ ಆಟೋ ಚಾಲಕರೂ ಬದಲಾಗಬೇಕು. ಆದ್ದರಿಂದ ಅರಿವು ಮೂಡಿಸುವ ಕೆಲ್ಸ ಮಾಡ್ತೀವಿ ಎಂದು ಆಟೋ ಚಾಲಕರ ಸಂಘದವರು ಹೇಳಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಓಲಾ, ಊಬರ್ ಆಟೋ ಬಂದ್- ಸರ್ಕಾರದಿಂದಲೇ ಆಟೋ ದರ ನಿಗದಿ

ಒಲಾ ಉಬರ್ ದುಪ್ಪಟ್ಟು ಲೂಟಿಗೆ ಸಾರಿಗೆ ಇಲಾಖೆ ಮೂಗುದಾರ ಹಾಕುತ್ತಾ ಇಲ್ವಾ ಅನ್ನೋದು ನೋಡಬೇಕು. ಆದ್ರೇ ಒಗ್ಗಟ್ಟಿಗೆ ಹೆಸರಾಗಿರುವ ಆಟೋ ಚಾಲಕರು ಮನಸು ಮಾಡಿದರೆ ಈ ಲೂಟಿಕೋರರನ್ನು ಮಟ್ಟ ಹಾಕಿ ತಾವೇ ಪ್ರಯಾಣಿಕರಿಗೆ ಹೊರೆಯಾಗದಂತೆ ಸೇವೆ ನೀಡಬಹುದು ಅನ್ನೋದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *