ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಸಿಗದೇ ಆಟೋ ಚಾಲಕರ ಪರದಾಟ ಪರಿಸ್ಥಿತಿ ಕೊನೆಗೂ ಸಹಜಸ್ಥಿತಿಗೆ ಮರಳುತ್ತಿದೆ.
ಪ್ರತಿ ನಿತ್ಯ ಗ್ಯಾಸ್ ಬಂಕ್‌ಗಳ ಮುಂದೆ ಕಿಲೋ ಮೀಟರ್‌ಗಟ್ಟಲೆ ಇರುತ್ತಿದ್ದ ಆಟೋ ಇದೀಗ ಕಾಣಿಸುತ್ತಿಲ್ಲ. ಆಟೋ ಗ್ಯಾಸ್ ಎಲ್ಲಾ ಬಂಕ್‌ಗಳಿಗೆ ಸರಬರಾಜಾಗುತ್ತಿದೆ. ಬೆಂಗಳೂರು ನಗರದ ಬಹುತೇಕ ಬಂಕ್‌ಗಳಲ್ಲಿ ಆಟೋ ಗ್ಯಾಸ್ ಸಿಗುತ್ತಿದೆ. ಆದರೆ ಗ್ಯಾಸ್ ದರ ಏರಿಕೆ ಮಾಡಿರೋದು ಚಾಲಕರಿಗೆ ನುಂಗಲಾರದ ತುತ್ತಾಗಿದೆ. ಒಂದೊಂದು ಬಂಕ್‌ನಲ್ಲಿ ಒಂದೊಂದು ದರ ನಿಗದಿ ಮಾಡಲಾಗಿದೆ. ಇದನ್ನೂ ಓದಿ:ಮೀ ಸಲು ಕಾನೂನು – ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸ್ತ್ರೀ ಸಮಾವೇಶ: ಶೋಭಾ ಕರಂದ್ಲಾಜೆ
ಈ ಮೊದಲು ಲೀಟರ್ ಎಲ್‌ಪಿಜಿಗೆ 65 ರೂ. ಇದ್ದದ್ದು, ಈಗ 120 ರೂ.ವರೆಗೆ ಆಗಿದೆ. ದಯಮಾಡಿ ಸರ್ಕಾರ ಗ್ಯಾಸ್ ದರವನ್ನು ಕಡಿಮೆ ಮಾಡಿಸಬೇಕು ಎಂದು ಆಟೋ ಚಾಲಕರು ಮನವಿ ಮಾಡಿಕೊಂಡಿದ್ದಾರೆ.
ಇನ್ನು, ಹಲವು ಜಿಲ್ಲೆಗಳಲ್ಲೂ ಆಟೋ ಗ್ಯಾಸ್ ಸಮಸ್ಯೆ ತೀವ್ರವಾಗಿತ್ತು. ಆದ್ರೀಗ ನಿನ್ನೆ ರಾತಿಯಿಂದ ಬಂಕ್‌ಗಳಿಗೆ ಆಟೋ ಎಲ್‌ಪಿಜಿ ಪೂರೈಕೆ ಆಗ್ತಿದೆ. ಆದ್ರೆ ಲೀಟರ್ ಗ್ಯಾಸ್ 54 ರೂ. ಇದ್ದದ್ದು, 99 ರೂ.ಗೆ ತಲುಪಿದೆ. ಹೀಗಾಗಿ ಚಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತ, ರಾಯಚೂರಿನ ಮಸ್ಕಿಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವದಿಂದ ಗ್ರಾಹಕರು ಪರದಾಡಿದ್ರು. ಒಂದು ಸಿಲಿಂಡರ್‌ಗಾಗಿ ಗೋದಾಮು ಮುಂದೆ ಗ್ರಾಹಕರು 6 ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗೋದಾಮಿನ ಮುಂದೆ ಮಹಿಳೆಯರು, ಮಕ್ಕಳು, ವೃದ್ಧರು ಕ್ಯೂ ನಿಂತು ಸಿಲಿಂಡರ್ ಪಡೆಯಬೇಕಾಗಿದೆ.ಇದನ್ನೂ ಓದಿ:ಪಾ ಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ ಆರಂಭ – ಇರಾನಿನ ಕೆಲ ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ

