ಆಟೋ ಚಾಲಕನ ಕೊಲೆಗೈದು ಮೂಟೆ ಕಟ್ಟಿ ಎಸೆದ ಪ್ರಕರಣ – ಆರೋಪಿ ಪತ್ನಿ, ಪುತ್ರ, ಪ್ರಿಯಕರ ಅರೆಸ್ಟ್

Public TV
1 Min Read

– ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ
– ಹಣದಾಸೆಗೆ ರವಿಕುಮಾರ್ ಹತ್ಯೆಗೆ ತಾಯಿ-ಮಗ ಸ್ಕೆಚ್

ಚಿತ್ರದುರ್ಗ: ಅಕ್ರಮ ಸಂಬಂಧಕ್ಕಾಗಿ (Illicit Relationship) ಗಂಡನನ್ನೇ ಕೊಲೆಗೈದು ಮೂಟೆಕಟ್ಟಿ ಎಸೆದಿದ್ದ ಪತ್ನಿ ಪೊಲೀಸರ ಬಲೆಗೆ ಸಿಲುಕಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

ಮೃತ ಆಟೋ ಚಾಲಕ ರವಿಕುಮಾರ್

ಚಿತ್ರದುರ್ಗ ತಾಲೂಕಿನ ಈರಜ್ಜನಹಟ್ಟಿ ಗ್ರಾಮದ ಬಳಿ ಜುಲೈ 20ರಂದು ಆಟೋ ಚಾಲಕ ರವಿಕುಮಾರ್ (51) ಕೊಲೆ ನಡೆದಿದ್ದು, ಮೂಟೆ ಕಟ್ಟಿ ಬಿಸಾಕಿದ ಸ್ಥಿತಿಯಲ್ಲಿ ರವಿಕುಮಾರ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಪೊಲೀಸರ ಬಳಿ ಹೈಡ್ರಾಮ ಮಾಡಿದ್ದ ಪತ್ನಿ ಸುನಿತಾ, ತನ್ನ ಮಗಳ ಗಂಡನ ಮೇಲೆ ಕೊಲೆ ಆರೋಪ ಹೊರಿಸಿದ್ದಳು. ಆದರೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಅಸಲಿ ಸತ್ಯ ಬಯಲಿಗೆಳೆದಿದ್ದು, ಮೃತ ರವಿಕುಮಾರ್ ಪತ್ನಿ ಸುನೀತಾ, ಪುತ್ರ ವಿಷ್ಣು ಹಾಗು ಆಕೆಯ ಪ್ರಿಯಕರ ಗಣೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಶಾಸಕ ಬೈರತಿ ಬಸವರಾಜ್‌ಗೆ ಬಿಗ್‌ ರಿಲೀಫ್‌

ಬೆಂಗಳೂರು ಮೂಲದವನಾದ ಗಣೇಶ್ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದು, ಕೆಲ ತಿಂಗಳಿಂದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ. ಈ ವೇಳೆ ಸುನೀತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇವರ ಕಳ್ಳಾಟಕ್ಕೆ ಅಡ್ಡಿಯಾಗಿದ್ದ ರವಿಕುಮಾರ್ ಕೊಲೆಗೆ ಸಂಚು ರೂಪಿಸಿದ್ದರು. ಸುನಿತಾ, ಗಣೇಶನಲ್ಲಿದ್ದ ಹಣದಾಸೆಗೆ ಬಲಿಯಾಗಿ ತನ್ನ ಗಂಡನನ್ನೆ ಕೊಲ್ಲಲು ಸಾಥ್ ನೀಡಿದ್ದಾಳೆ. ಡಿವೈಎಸ್ಪಿ ದಿನಕರ್ ಹಾಗು ಸಿಪಿಐ ಮುದ್ದುರಾಜ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕರ್ತವ್ಯ ಲೋಪ; ಧಾರವಾಡ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಅಮಾನತು

Share This Article