– ಆಟೋದಲ್ಲಿ ಸಂಚಾರಿಸೋ ಪ್ರಯಾಣಿಕರಿಗೆ ಕೃತಿಗಳ ಗ್ರಂಥಾಲಯ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚು ಪರ ಭಾಷಿಗರೇ ಜಾಸ್ತಿ. ಪರ ಭಾಷಿಗರಿಗೆ ಕನ್ನಡದ ಸೊಗಡು, ಕನ್ನಡ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಆಟೋ ಡ್ರೈವರ್ ಮಾಡುತ್ತಿರೋ ಕೆಲಸ ನೋಡಿದರೆ ಬೆರಗಾಗ್ತೀರಾ.
ಈ ಆಟೋದಲ್ಲಿ ಹಿಂದೆ, ಮುಂದೆ, ಒಳಗೆ ಎಲ್ಲಾ ಬರೀ ಸಾಹಿತಿಗಳ ಫೋಟೋಗಳಿದೆ. ಅಷ್ಟೇ ಅಲ್ಲದೇ ಒಳಗಡೆ ಕುಳಿತು ಪ್ರಯಾಣ ಮಾಡೋ ಪ್ರಯಾಣಿಕರಿಗೆ ಕನ್ನಡದ ಕಂಪು ಸಾರಲು ಆಟೋ ಒಳಗಡೆ ಚಿಕ್ಕದಾಗಿ ಗ್ರಂಥಾಲಯವೇ ಇದೆ. ಕನ್ನಡದ ಹಿರಿಮೆ, ಇತಿಹಾಸವನ್ನು ಸಾರುವ ಗ್ರಂಥಗಳು ಮತ್ತು ಕನ್ನಡ ಕವನ, ಕಾದಂಬರಿಗಳಿವೆ.
ಮಾಗಡಿ ರಸ್ತೆಯ ದಾಸರಹಳ್ಳಿ ನಿವಾಸಿ ಶಿವಕುಮಾರ್ ಈ ರೀತಿ ಕನ್ನಡ ನಾಡು ನುಡಿಯ ಬಗ್ಗೆ ಸಾರುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಈ ರೀತಿಯ ಕಾಯಕ ಮಾಡ್ತಾ ಇದ್ದು, ಎಷ್ಟೋ ಹೊರ ಭಾಷಿಗರು ಪುಸ್ತಕಗಳನ್ನು ತೆಗದುಕೊಂಡು ಕನ್ನಡ ಹಿರಿಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ರೀತಿ ಕನ್ನಡ ಹಿರಿಮೆಯನ್ನು ಸಾರುವುದಲ್ಲದೇ ಮಹಿಳೆಯರಿಗೆ ಹೆರಿಗೆಯ ಸಂದರ್ಭದಲ್ಲಿ ಉಚಿತ ಆಟೋ ನೀಡುತ್ತಿದ್ದಾರೆ. ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋದ ಚಿನ್ನ ಪೊಲೀಸರಿಗೆ ವಾಪಸ್ ಕೊಟ್ಟು ಎಷ್ಟೋ ಹೆಣ್ಣು ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಇದನ್ನ ಗುರುತಿಸಿದ ಪೊಲೀಸರು 18 ಬಾರಿ ಪ್ರಶಂಸೆಯ ಪ್ರಶಸ್ತಿ ಪತ್ರ ನೀಡಿದ್ದಾರೆ.
ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕರು, ಪ್ರಯಾಣಿಕರು ಕಿರಿಕಿರಿ ಮಾಡುತ್ತಾರೆ ಮತ್ತು ಹಣ ಸುಲಿಗೆ ಮಾಡೋದಲ್ಲದೇ ಬೇರೆ ಭಾಷೆ ಮಾತಾಡಿ ಕನ್ನಡವನ್ನು ಮರೆಯತ್ತಿದ್ದಾರೆ ಎಂಬ ಆರೋಪಗಳು ಜಾಸ್ತಿ ಕೇಳಿ ಬರುತ್ತಿದೆ. ಅದರ ಮಧ್ಯೆ ಈ ರೀತಿಯಲ್ಲಿ ಎಲ್ಲಾ ಆಟೋ ಚಾಲಕರು ಅಳವಡಿಸಿಕೊಂಡರೆ ಕನ್ನಡದ ಹಿರಿಮೆ ಹೆಚ್ಚುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews