ಒಲಿಂಪಿಕ್ಸ್‌ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌!

Public TV
3 Min Read

– ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಉಗ್ರರಿಂದ ಬೆದರಿಕೆ; ಭಯಾನಕ ವೀಡಿಯೋ ಬಿಡುಗಡೆ

ಪ್ಯಾರಿಸ್‌: ಕ್ರೀಡೆಗಳ ಮಹಾ ಸಂಗಮ ಒಲಿಂಪಿಕ್ಸ್-2024‌ರ (Paris Olympics) ಕ್ರೀಡಾಹಬ್ಬ ಇದೇ ಜುಲೈ 26 ರಿಂದ ಆರಂಭವಾಗುತ್ತಿದೆ. ಅದ್ಧೂರಿ ಕ್ರೀಡಾ ಉತ್ಸವಕ್ಕೆ ಪ್ಯಾರಿಸ್‌ ಸಹ ಸಜ್ಜಾಗಿದೆ. ಇಂತಹ ಸಂದರ್ಭದಲ್ಲೇ ನಡೆದ ಅಹಿತಕರ ಘಟನೆಯೊಂದು ಕ್ರೀಡಾಭಿಮಾನಿಗಳನ್ನು (Sports Fans) ಬೆಚ್ಚಿ ಬೀಳಿಸಿದೆ.

ಹೌದು. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ವೀಕ್ಷಣೆಗೆಂದು ಬಂದಿದ್ದ ಆಸ್ಟ್ರೇಲಿಯಾ ಮೂಲದ 25 ವರ್ಷದ ಮಹಿಳೆಯ (Australian Woman) ಮೇಲೆ ಐವರು ಕಾಮುಕರು ಗ್ಯಾಂಗ್‌ ರೇಪ್ ಮಾಡಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ಸುದ್ದಿಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

ಇದೇ ಜುಲೈ 19ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೌಲಿನ್ ರೋಗ್ ಕ್ಯಾಬರ್ಟ್‌ನ ಪಬ್‌ವೊಂದರಲ್ಲಿ ಮದ್ಯ ಸೇವಿಸಿ, ಹೊರ ಬರುವ ಸಂದರ್ಭದಲ್ಲಿ ಆಕೆಯನ್ನು ಐವರು ಕಾಮುಕರ ಗ್ಯಾಂಗ್‌ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಫ್ರಾನ್ಸ್​ನಲ್ಲಿ ಮಹಿಳೆಯರಿಗೆ ಸರಿಯಾದ ಸುರಕ್ಷತೆ ಇಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಂಬೈಗೆ ಗುಡ್‌ಬೈ ಹೇಳ್ತಾರಾ ರೋಹಿತ್‌, ಬುಮ್ರಾ, ಸೂರ್ಯ? – 2025ರ ಐಪಿಎಲ್‌ನ ಮಹತ್ವದ 5 ಬೆಳವಣಿಗೆಗಳು ಹೀಗಿವೆ

ವೈರಲ್‌ ವೀಡಿಯೋನಲ್ಲಿ ಏನಿದೆ?
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಸಂತ್ರಸ್ತ ಮಹಿಳೆ ಹರಿದ ಬಟ್ಟೆಯಲ್ಲಿದ್ದು, ಸ್ಥಳೀಯರ ರಕ್ಷಣೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನೇಕ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪ್ಯಾರಿಸ್ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದರೂ ಈ ಘಟನೆ ನಡೆದಿರುವುದು ನಿಜಕ್ಕೂ ಆಘಾತಕಾರಿ ಸಂಗತಿ, ಇದರಿಂದ ಅನೇಕ ಕ್ರೀಡಾಭಿಮಾನಿಗಳೂ ಆತಂಕಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

ಭಯೋತ್ಪಾದಕರಿಂದ ಬೆದರಿಕೆ:
ಪ್ಯಾರಿಸ್‌ ಒಲಿಂಪಿಕ್ಸ್‌-2024 ಕ್ರೀಡಾಕೂಟಕ್ಕೆ ಈಗಾಗಲೇ ಹಮಾಸ್‌ ಉಗ್ರರು ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಮಹಿಳೆಯ ತಲೆ ಕತ್ತರಿಸಿದ ಭಯಾನಕ ವೀಡಿಯೋವೊಂದನ್ನೂ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಪ್ಯಾರಿಸ್‌ ಒಲಿಂಪಿಕ್ಸ್‌ ಕೂಟಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಫ್ರಾನ್ಸ್‌ ಜೊತೆಗೆ ಭಾರತದ ಯೋಧರೂ ಭದ್ರತೆಗೆ ಕೈಜೋಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

ಒಲಿಂಪಿಕ್ಸ್‌ಗೆ ಭಾರತ ತಂಡ ಸಜ್ಜು:
ಜುಲೈ 26ರಿಂದ ಶುರುವಾಗುವ ಕ್ರೀಡಾಕೂಟದಲ್ಲಿ 117 ಅಥ್ಲೀಟ್ಸ್ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ಮಾಹಿತಿ ನೀಡಿದ್ದಾರೆ. ಕ್ರೀಡಾಪಟುಗಳ ಜೊತೆಗೆ 140 ಸಹಾಯಕ ಸಿಬ್ಬಂದಿ (ಒಟ್ಟು 257) ಕ್ರೀಡಾಗ್ರಾಮ ತಲುಪಲಿದ್ದಾರೆ.

Share This Article