ಕಮ್ಮಿನ್ಸ್‌ ಬೆಂಕಿ ಬೌಲಿಂಗ್‌ – 218 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

Public TV
2 Min Read

ಲಂಡನ್‌: ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಅವರ ಮಾರಕ ಬೌಲಿಂಗ್‌ ನೆರವಿನಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ (WTC Final) ಆಸ್ಟ್ರೇಲಿಯಾ (Australia) 218 ರನ್‌ಗಳ ಮುನ್ನಡೆ ಸಾಧಿಸಿದೆ.

ಬುಧವಾರ 43 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ (South Africa) 95 ರನ್‌ ಸೇರಿಸಿ 138 ರನ್‌ಗಳಿಗೆ ಆಲೌಟ್‌ ಆಯ್ತು.

ನಾಯಕ ಟೆಂಬಾ ಬವುಮಾ 36 ರನ್‌ ಹೊಡೆದರೆ ಡೇವಿಡ್ ಬೆಡಿಂಗ್ಹ್ಯಾಮ್ 45 ರನ್‌ ಹೊಡೆದು ಔಟಾದರು. ಪ್ಯಾಟ್‌ ಕಮ್ಮಿನ್ಸ್‌ ಅವರು 28 ರನ್‌ ನೀಡಿ 6 ವಿಕೆಟ್‌ ಪಡೆಯುವ ಮೂಲಕ ಆಫ್ರಿಕಾ ಬ್ಯಾಟಿಂಗ್‌ ಶಕ್ತಿಯನ್ನೇ ಕೆಡವಿದರು.

ನಂತರ ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿದೆ. ಅಲೆಕ್ಸ್‌ ಕ್ಯಾರಿ 43 ರನ್‌ (50 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 218 ರನ್‌ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಉಳಿದ 2 ವಿಕೆಟ್‌ ಗಳಿಂದ ಎಷ್ಟು ರನ್‌ ಗಳಿಸುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

 

ಎರಡನೇ ದಿನ ಒಟ್ಟು 14 ವಿಕೆಟ್‌ ಪತನಗೊಂಡಿದೆ. ಕಗಿಸೋ ರಬಡಾ ಮತ್ತು ಲುಂಗಿ ಎನ್‌ಗಿಡಿ ತಲಾ ಮೂರು ವಿಕೆಟ್‌ ಪಡೆದರೆ ಜಾನ್‌ಸೆನ್‌ ಮತ್ತು ಮುಲ್ಡರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article