ಪಾಂಡ್ಯ, ಕೆ.ಎಲ್ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ – ಅಕ್ಷರ್ ಆಟ ವ್ಯರ್ಥ, ಆಸೀಸ್‌ಗೆ 4 ವಿಕೆಟ್‌ಗಳ ಜಯ

Public TV
4 Min Read

ಮೊಹಾಲಿ: ಕೆಮರೋನ್‌ ಗ್ರೀನ್ (Cameron Green), ಮಾಥ್ಯೂವೇಡ್‌ (Matthew Wade) ಬ್ಯಾಟಿಂಗ್‌ ಅಬ್ಬರ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ  (Australia) ಮೊದಲ ಪಂದ್ಯದಲ್ಲೇ 4 ವಿಕೆಟ್‌ಗಳ ಜಯ ಸಾಧಿಸಿತು.

ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ (Toss) ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 208 ರನ್ (Score) ಗಳಿಸಿತು. 209 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆಸಿಸ್‌ ಪಡೆ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 211 ರನ್‌ಗಳಿಸಿ ಜಯ ಸಾಧಿಸಿತು.

ಟಾಸ್‌ ಗೆದ್ದು ನಂತರ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಮೊದಲ ಓವರ್‌ನಿಂದಲೇ ಅಬ್ಬರಿಸಲು ಶುರು ಮಾಡಿತು. ನಾಯಕ ಆರನ್‌ ಫಿಂಚ್‌ (Aaron Finch) ಜೊತೆ ಕೈಜೋಡಿಸಿದ ಕೆಮರೋನ್‌ ಗ್ರೀನ್ (Cameron Green) ಸಿಕ್ಸ್‌ ಫೋರ್‌ಗಳ ಬೇಟೆಯಾಡಿದ್ರು. ಆದರೆ ಅಷ್ಟರಲ್ಲೇ ಆಸಿಸ್‌ ತಂಡಕ್ಕೆ ಆಘಾತವಾಯಿತು. 13 ಎಸೆತಗಳಲ್ಲಿ 22 ರನ್‌ ಸಿಡಿಸಿದ್ದ ಆರನ್‌ ಫಿಂಚ್‌ ಅಕ್ಷರ್‌ ಪಟೇಲ್‌ ಓವರ್‌ನಲ್ಲಿ ಸಿಕ್ಸ್‌ ಸಿಡಿಸುವ ಪ್ರಯತ್ನದಲ್ಲಿ ಕ್ಲೀನ್‌ ಬೌಲ್ಡ್‌ ಆದ್ರು.

Image

ಗ್ರೀನ್‌ ಶೈನ್‌: ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದ ಕೆಮರೋನ್‌ ಗ್ರೀನ್‌ ಕೇವಲ 26 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಆರಂಭದಿಂದಲೂ ಅಬ್ಬರಿಸಿದ ಗ್ರೀನ್‌ 30 ಎಸೆತಗಳಲ್ಲಿ ಸ್ಫೋಟಕ 61 ರನ್‌ (4 ಸಿಕ್ಸರ್‌, 8 ಬೌಂಡರಿ) ಚಚ್ಚಿದರು. ಗ್ರೀನ್‌ಗೆ ಜೊತೆಯಾದ ಸ್ಟೀವ್‌ ಸ್ಮಿತ್‌ (Steven Smith) ಉತ್ತಮ ಸಾಥ್‌ ನೀಡಿದರು. ಇವರಿಬ್ಬರ ಸಾಂಘಿಕ ಬ್ಯಾಟಿಂಗ್‌ ಪ್ರದರ್ಶನದಿಂದ 40 ಎಸೆತಗಳಲ್ಲಿ 70 ರನ್‌ಗಳನ್ನು ಕಲೆ ಹಾಕಿದರು. ಗ್ರೀನ್‌ ಆಟಕ್ಕೆ ಬ್ರೇಕ್‌ ಹಾಕಿದ ಅಕ್ಷರ್‌ ಪಟೇಲ್‌ 30ನೇ ಎಸೆತದಲ್ಲಿ ಕ್ಲೀನ್‌ ಕ್ಯಾಚ್‌ ಮಾಡಿಸಿದರು.

ನಂತರದಲ್ಲಿ ಸಿಕ್ಸರ್‌ ವೀರ ಗ್ಲೇನ್‌ ಮ್ಯಾಕ್ಸ್‌ವೆಲ್‌ ನಿರೀಕ್ಷಿತ ಆಟವಾಡದೇ 3 ಎಸೆತಗಳಲ್ಲಿ 1 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಜೋಶ್‌ ಇಂಗ್ಲಿಸ್ 10 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 17 ರನ್‌ ಬಾರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಬಂದ ಟಿಂ ಡೇವಿಡ್‌, ಮಾಥ್ಯೂವೇಡ್‌ (Matthew Wade) ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ರು. ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡ ನಂತರವೂ ತಂಡದಲ್ಲಿ ಸಿಕ್ಸ್‌ ಬೌಂಡರಿಗಳ ಮಳೆ ಸುರಿಸಿದರು. ಟಿಂ ಡೇವಿಡ್‌ 14 ಎಸೆತಗಳಲ್ಲಿ 18 ರನ್‌ ಗಳಿಸಿದರೆ, ಮ್ಯಾಥ್ಯೂ ವೇಡ್‌  21 ಎಸೆತಗಳಲ್ಲಿ ಸ್ಫೋಟಕ 45ರನ್‌ (2 ಸಿಕ್ಸರ್‌, 6 ಬೌಂಡರಿ) ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮ ಓವರ್‌ನಲ್ಲಿ 1 ರನ್‌ ಬೇಕಿದ್ದ ವೇಳೆ ಚಾಹಲ್‌ ಮೊದಲ ಎಸೆತಗದಲ್ಲೇ ಟಿಮ್‌ ಡೇವಿಡ್‌ ವಿಕೆಟ್‌ ಉರುಳಿಸಿದರು. ಕೊನೆಯಲ್ಲಿ ಬಂದ ಪ್ಯಾಟ್‌ ಕಮ್ಮಿನ್ಸ್‌ (Pat Cummins) 19 ಓವರ್‌ನ 2ನೇ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಗೆಲುವಿನ ನಗೆ ಬೀರಿದರು.

ಅಕ್ಷರ್‌ ಪಟೇಲ್‌ ಬೌಲಿಂಗ್‌ ದಾಳಿ: 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿದ ಟೀಂ ಇಂಡಿಯಾದ (Team India) ಅಕ್ಷರ್‌ ಪಟೇಲ್‌ 3 ಪ್ರಮುಖ ವಿಕೆಟ್‌ಗಳನ್ನು ಕಿತ್ತರು.2 ಓವರ್‌ಗಳಲ್ಲಿ 27 ರನ್‌ ನೀಡಿದ ಉಮೇಶ್‌ ಯಾದವ್‌ 2 ವಿಕೆಟ್‌ಗೆ ತೃಪ್ತಿ ಪಟ್ಟುಕೊಂಡರು.

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. 9 ಎಸೆತ ಎದುರಿಸಿದ ನಾಯಕ ನಾಯಕ ರೋಹಿತ್ ಶರ್ಮಾ 11 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ರನ್ ಗಳಿಸುವಲ್ಲಿ ವಿಫಲರಾದರು. 7 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿದ ಕೊಹ್ಲಿ ನಥಾನ್ ಎಲ್ಲಿಸ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಆದರೆ ಮತ್ತೊಬ್ಬ ಆರಂಭಿಕನಾಗಿದ್ದ ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್ ‌ಅಬ್ಬರ ನಿಲ್ಲಲಿಲ್ಲ. ರಾಹುಲ್‌ಗೆ 3ನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ ಉತ್ತಮ ಸಾಥ್‌ ನೀಡಿದರು. ಈ ಇಬ್ಬರ ಜೋಡಿ ಉತ್ತಮ ಸಿಕ್ಸ್‌ ಫೋರ್‌ಗಳನ್ನು ಸಿಡಿಸುತ್ತಾ ಆಸಿಸ್‌ ಬೌಲರ್‌ಗಳನ್ನು ಬೆಂಡೆತ್ತಿತು. ನಿಧಾನ ಗತಿಯ ಸ್ಟ್ರೈಕ್ ರೇಟ್ ಮತ್ತು ಕಳಪೆ ಫಾರ್ಮ್‌ಗಾಗಿ ಟೀಕೆಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ತಮ್ಮ ಬ್ಯಾಟ್‌ ಮೂಲಕ ಉತ್ತರ ನೀಡಿದರು.

ಪಾಂಡ್ಯ ಪರಾಕ್ರಮ, ರಾಹುಲ್‌ ಮಿಂಚಿಂಗ್‌: ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡರೂ ರನ್‌ ವೇಗ ಕಡಿಮೆಯಾಗಲಿಲ್ಲ. ಸೂರ್ಯಕುಮಾರ್‌ ಯಾದವ್‌ ಹಾಗೂ ರಾಹುಲ್‌ (KL Rahul) ಇಬ್ಬರ ಜೋಡಿಯೂ ಪವರ್‌ಪ್ಲೇ ನಿಂದಲೇ ಅಬ್ಬರಿಸಲು ಶುರು ಮಾಡಿತು. ಪ್ರತಿ ಓವರ್‌ನಲ್ಲೂ ಬೌಂಡರಿ ಸಿಕ್ಸರ್‌ಗಳ ಚೆಂಡಾಡಿ, ಆಸಿಸ್‌ ಬೌಲರ್‌ಗಳ ಬೆವರಿಳಿಸಿ, 65 ರನ್‌ಗಳ ಜೊತೆಯಾಟವಾಡಿತು. 35 ಎಸೆತಗಳಲ್ಲಿ 55 ರನ್ (3 ಸಿಕ್ಸರ್‌, 4 ಬೌಂಡರಿ) ಗಳಿಸಿದ ಕೆ.ಎಲ್‌ ರಾಹುಲ್‌ (KL Rahul) ವಿಕೆಟ್‌ ಒಪ್ಪಿಸಿದರು. ಅರ್ಧ ಶತಕ ಪೂರೈಸುವ ಮೂಲಕ ಟಿ20 ನಲ್ಲಿ 18ನೇ ಅರ್ಧಶತಕ ಹಾಗೂ 2 ಸಾವಿರ ರನ್‌ ಗಳಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಸಹ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರು. 24 ಎಸೆತಗಳಲ್ಲಿ 46 ರನ್‌ (4 ಸಿಕ್ಸರ್‌, 2 ಬೌಂಡರಿ) ಗಳಿಸಿದ್ದ ಸೂರ್ಯಕುಮಾರ್‌ ಯಾದವ್‌ ಅರ್ಧ ಶತಕದ ಸನಿಹದಲ್ಲಿರುವಾಗಲೇ ಸಿಕ್ಸರ್‌ ಸಿಡಿಸುವ ಬರದಲ್ಲಿ ಔಟಾದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ ಕೂಡ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು.

ಕೊನೆಯ ಓವರ್‌ವರೆಗೂ ಅಬ್ಬರಿಸಿದ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಆಟ ಭಾರತ ಬೃಹತ್ ಮೊತ್ತದ ರನ್‌ ಕಲೆ ಹಾಕಲು ನೆರವಾಯಿತು. 30 ಎಸೆತಗಳಲ್ಲಿ 7 ಬೌಂಡರಿ 5 ಭರ್ಜರಿ ಸಿಕ್ಸರ್ ನೆರವಿನಿಂದ 71 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಬಾರಿಸುವ ಮೂಲಕ ಟೀಂ ಇಂಡಿಯಾವನ್ನು 200 ರನ್‌ಗಳ ಗಡಿ ದಾಟಿಸಿದರು.

ಆಸ್ಟ್ರೇಲಿಯಾ ಪರವಾಗಿ ಜೋಶ್ ಹೇಜಲ್‌ವುಡ್ 4 ಓವರ್ ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ನಥಾನ್ ಎಲ್ಲಿಸ್ 4 ಓವರ್ ಗಳಲ್ಲಿ ರನ್ ನೀಡಿ 3 ವಿಕೆಟ್ ಪಡೆದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *