T20 ವಿಶ್ವಕಪ್‌ಗೆ ಕಾಂಗರೂ ಪಡೆ ಸಿದ್ಧ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಕೊಕ್‌

Public TV
2 Min Read

– ಆರ್‌ಸಿಬಿ ಸ್ಟಾರ್ಸ್‌ ಗ್ರೀನ್‌, ಮ್ಯಾಕ್ಸಿ ಇನ್‌, ಸ್ವೀವ್‌ ಸ್ಮಿತ್‌ ಔಟ್‌, ಮೆಕ್‌ಗಾರ್ಕ್‌ಗೂ ಸ್ಥಾನವಿಲ್ಲ

ಕ್ಯಾನ್ಬೆರಾ: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗೆ ಇನ್ನು ಒಂದು ತಿಂಗಳು ಮಾತ್ರವೇ ಬಾಕಿಯಿದೆ. ಎಲ್ಲಾ ದೇಶದ ಕ್ರಿಕೆಟ್‌ ಮಂಡಳಿಗಳು ಬಲಿಷ್ಠ ಆಟಗಾರರ ತಂಡಗಳನ್ನ ಪ್ರಕಟಿಸುತ್ತಿವೆ. ಈ ಬಾರಿ ವಿಶ್ವಕಪ್‌ನಲ್ಲಿ ಹೊಸ ಮುಖಕ್ಕೆ ನಾಯಕತ್ವದ ಮಣೆ ಹಾಕಿರುವ ಆಸ್ಟ್ರೇಲಿಯಾ ಮಂಡಳಿ ಬಲಿಷ್ಠ ತಂಡವನ್ನು (Australia Squad) ಪ್ರಕಟಿಸಿದೆ. ಅಲ್ಲದೇ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಕೊಕ್‌ ನೀಡಿದೆ.

ಈ ಬಾರಿ ಟಿ20 ವಿಶ್ವಕಪ್‌ಗೆ ಮಿಚೆಲ್‌ ಮಾರ್ಷ್‌ (Mitchell Marsh) ಅವರಿಗೆ ಆಸೀಸ್‌ ನಾಯಕತ್ವದ ಹೊಣೆ ನೀಡಲಾಗಿದೆ. ಪ್ಯಾಟ್‌ ಕಮ್ಮಿನ್ಸ್‌ ಕೂಡ ತಂಡದಲ್ಲಿದ್ದು ಪ್ಲೇಯರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೇ ಈ ಬಾರಿ ಆಸೀಸ್‌ ತಂಡದ ಮಾಜಿ ನಾಯಕ ಸ್ವೀವ್‌ ಸ್ಮಿತ್‌ (Steve Smith), ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸ್ಫೋಟಕ ಪದರ್ಶನ ನೀಡುತ್ತಿರುವ ಫ್ರೇಸರ್‌ ಮೆಕ್‌ಗಾರ್ಕ್‌ ಅವರನ್ನೂ ಕೈಬಿಟ್ಟು ಆಶ್ಟನ್ ಅಗರ್ ಅವರಂತಹ ಹೊಸ ಮುಖಕ್ಕೆ ಮಣೆಹಾಕಿರುವುದು ಗಮನಾರ್ಹವಾಗಿದೆ.

ನಾಯಕತ್ವದ ಹೊಣೆ ಹೊತ್ತಿರುವ ಮಿಚೆಲ್‌ ಮಾರ್ಷ್‌ ಐಪಿಎಲ್‌ ಮೂಲಕ ಟಿ20 ಯಲ್ಲಿ ಆಲ್‌ರೌಂಡರ್‌ ಅನುಭವ ಪಡೆದುಕೊಂಡಿದ್ದಾರೆ. ಅಲ್ಲದೇ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಆಡಿರುವ ಮಿಚೆಲ್‌ ಮಾರ್ಷ್‌, ಭಾರತ ಸೇರಿದಂತೆ ಹಲವು ದೇಶಗಳೊಂದಿಗೆ ಏಕದಿನ, ಟಿ20 ಹಾಗೂ ಟೆಸ್ಟ್‌ ಸರಣಿಯನ್ನು ಆಡಿದ ಅನುಭವ ಹೊಂದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾ ಪ್ರಕಟ – ಯಾರಿಗೆಲ್ಲ ಸ್ಥಾನ?

ಆಸೀಸ್‌ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೂನ್‌ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್‌, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆಡಮ್ ಝಂಪಾ. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಕಿವೀಸ್‌ ಬಲಿಷ್ಠ ತಂಡ ರೆಡಿ – ವಿಲಿಯಮ್ಸನ್‌ ಕ್ಯಾಪ್ಟನ್‌, ಕನ್ನಡಿಗ ರಚಿನ್‌ಗೂ ಸ್ಥಾನ

ಅಖಾಡದಲ್ಲಿ ಹೆಡ್:‌
ಕಳೆದ ವರ್ಷ ಏಕದಿನ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ 137 ರನ್‌ ಸಿಡಿಸುವ ಜೊತೆಗೆ ಭಾರತದ ವಿಶ್ವಕಪ್‌ ಕನಸನ್ನು ಭಗ್ನಗೊಳಿಸಿದ್ದ ಟ್ರಾವಿಸ್‌ ಹೆಡ್‌ ಅವರಿಗೂ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ನೀಡಲಾಗಿದೆ. ಸದ್ಯ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಟ್ರಾವಿಸ್‌ ಹೆಡ್‌ ಸ್ಫೋಟಕ ಪ್ರದರ್ಶನವನ್ನೇ ನೀಡುತ್ತಿದ್ದು, ಇದು ಆಸೀಸ್‌ ತಂಡಕ್ಕೆ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

Share This Article