ಭಾರತದ ಸೈನಿಕರೊಂದಿಗೆ ದುರ್ವರ್ತನೆ – ಚೀನಾ ತರಾಟೆಗೆ ತೆಗೆದುಕೊಂಡ ಆಸ್ಟ್ರೇಲಿಯಾ

Public TV
1 Min Read

ನವದೆಹಲಿ: ಗಡಿ ವಿಚಾರವಾಗಿ ಭಾರತದ ಸೈನಿಕರೊಂದಿಗೆ ಚೀನಾ ದುರ್ವರ್ತನೆ ತೋರುತ್ತಿದೆ ಎಂದು ಆಸ್ಟ್ರೇಲಿಯಾ ಉಪ ಪ್ರಧಾನಿ ಹಾಗೂ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಅವರು ಚೀನಾ ವಿರುದ್ಧ ಕಿಡಿಕಾರಿದ್ದಾರೆ.

ಒಂದು ದೇಶವು ತನ್ನ ಗಡಿ ವಿವಾದವನ್ನು ನಿಯಮಗಳ ಬದಲಾಗಿ, ಅಧಿಕಾರದಿಂದ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದೆ. ಇದು ಕಳವಳಕಾರಿ ಎಂದು ಚೀನಾ ವಿರುದ್ಧ ಮಾರ್ಲ್ಸ್‌ ಗುಡುಗಿದ್ದಾರೆ. ಇದನ್ನೂ ಓದಿ: 24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

ದೆಹಲಿಯಲ್ಲಿರುವ ಆಸ್ಟ್ರೇಲಿಯನ್ ಹೈಕಮಿಷನ್‌ನಲ್ಲಿ ಮಾತನಾಡಿದ ಅವರು, ಚೀನಾ ತನ್ನ ಸುತ್ತಲಿನ ಪ್ರದೇಶವನ್ನು ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ರೂಪಿಸಲು ಪ್ರಯತ್ನಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಚೀನಾದ ನಡೆಯನ್ನು ನಾವು ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ದಕ್ಷಿಣ ಚೀನಾ ಸಮುದ್ರದಲ್ಲಿ ಮತ್ತು ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಭಾರತೀಯ ಸೈನಿಕರೊಂದಿಗೆ ಚೀನಾ ವರ್ತನೆಯನ್ನು ನಾವು ನೋಡಿದ್ದೇವೆ. ಆ ಘಟನೆಗೆ ಸಂಬಂಧಿಸಿದಂತೆ ನಾವು ಭಾರತದೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

ಚೀನಾ ನಮ್ಮ ಅತಿದೊಡ್ಡ ಭದ್ರತಾ ಆತಂಕವಾಗಿದೆ, ಭಾರತಕ್ಕೂ ಕೂಡ. ಈ ಸಂದರ್ಭದಲ್ಲಿ ನಾವು ಒಗ್ಗಟ್ಟಾಗುವ ಅಗತ್ಯವಿದೆ. ನಾವು ನೋಟು ವಿನಿಮಯ ಮಾಡಿಕೊಳ್ಳುವ ಸ್ನೇಹಿತರು. ಆರ್ಥಿಕ ಮತ್ತು ರಕ್ಷಣಾ ವಿಚಾರವಾಗಿ ಉತ್ತಮ ಬಾಂಧವ್ಯಕ್ಕೆ ನಾವು ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಭಾರತ-ಆಸ್ಟ್ರೇಲಿಯಾ ರಕ್ಷಣಾ ಸಂಬಂಧಗಳ ಕುರಿತು ಮಾತನಾಡಿ, ಆಸ್ಟ್ರೇಲಿಯಾ ಮತ್ತು ಭಾರತ ರಕ್ಷಣಾ ಸಂಬಂಧದಲ್ಲಿ P-8 ವಿಮಾನಗಳನ್ನು ಹೊಂದಿದ್ದೇವೆ. ನಾವು ಭಾರತದ ರಕ್ಷಣಾ ಸಚಿವರೊಂದಿಗೆ ಸಭೆ ನಡೆಸಿದ್ದೇವೆ. ಅವರನ್ನೂ ಆಸ್ಟ್ರೇಲಿಯಾಕ್ಕೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *