ನವದೆಹಲಿ: ಅಮೆರಿಕಕ್ಕೆ ಆಮದಾಗುವ ಭಾರತದ ಸರಕುಗಳ ಮೇಲೆ ವಿಧಿಸಿರುವ ಶೇ.50 ಸುಂಕವು ಆಗಸ್ಟ್ 27ರಿಂದ ಜಾರಿಯಾಗಲಿದೆ. ಇದು ಭಾರತದ ಆರ್ಥಿಕತೆ (Indian Economy) ಮೇಲೆ ಹೊಡೆತ ಬೀಳಲಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಈ ಹಿನ್ನೆಲೆ ಮಂಗಳವಾರ (ಆ.26) ಪ್ರಧಾನಿ ಕಚೇರಿ (PM Office) ಮಹತ್ವದ ಸಭೆಗೆ ಮುಂದಾಗಿದೆ.
ಭಾರತೀಯ ರಫ್ತುದಾರರು ಎದುರಿಸುತ್ತಿರುವ ಪರಿಣಾಮಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ. ಹಾಗಾಗಿ ಕ್ರಮಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿ (PM Modi) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಕರೆಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ
ಅಮೆರಿಕದಲ್ಲಿ ಮಾರಾಟ ಮಾಡಲಾಗುವ ಭಾರತದ ಸರಕುಗಳಿಗೆ ವಿಧಿಸಲಾಗಿದ್ದ ಶೇ.50 ರಷ್ಟು ಸುಂಕ ಬುಧವಾರದಿಂದ ಜಾರಿಗೆ ಬರಲಿದೆ. ಅದರಂತೆ ಆ.27ರಿಂದ ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ಸರಕುಗಳು 50% ಸುಂಕಕ್ಕೆ ಒಳಪಟ್ಟಿರುತ್ತವೆ. ಇದನ್ನೂ ಓದಿ: ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ
ಟ್ರಂಪ್ ಸುಂಕ ವಿಧಿಸಿದ್ದೇಕೆ?
ರಷ್ಯಾದ ತೈಲ ಖರೀದಿ ಮೂಲಕ ಭಾರತ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಅನ್ನೋದು ಟ್ರಂಪ್ (Donald Trump) ನಂಬಿಕೆಯಾಗಿದೆ. ಹೀಗಾಗಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಹಲವು ಬಾರಿ ಟ್ರಂಪ್ ಹೇಳಿದರು. ಅಲ್ಲದೇ ಅಮೆರಿಕದ ರಾಜತಾಂತ್ರಿಕರೂ ಭಾರತಕ್ಕೆ ತೈಲ ಖರೀದಿ ನಿಲ್ಲಿಸುವಂತೆ ಎಚ್ಚರಿಸಿದರು. ಆದರೆ ರಷ್ಯಾದ ಸ್ನೇಹ ಬಿಟ್ಟುಕೊಡದ ಭಾರತ, ತೈಲ ಖರೀದಿಯನ್ನ ಮುಂದುವರಿಸಿದೆ. ಹೀಗಾಗಿ ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 25% ಸುಂಕ ವಿಧಿಸಿದ್ದಾರೆ. ಇದನ್ನೂ ಓದಿ: ಹೌತಿಗಳ ವಿರುದ್ಧ ಸಿಡಿದೆದ್ದ ಇಸ್ರೇಲ್ – ಯೆಮೆನ್ ಮೇಲೆ ವೈಮಾನಿಕ ದಾಳಿ
ಈಗಿರುವ ಸುಂಕ ಎಷ್ಟು?
* 41% ಸುಂಕ – ಸಿರಿಯಾ
* 40% ಸುಂಕ – ಲಾವೋಸ್, ಮ್ಯಾನ್ಮಾರ್ (ಬರ್ಮಾ)
* 39% ಸುಂಕ – ಸ್ವಿಟ್ಜರ್ಲೆಂಡ್
* 35% ಸುಂಕ – ಇರಾಕ್, ಸೆರ್ಬಿಯಾ
* 30% ಸುಂಕ – ಅಲ್ಜೀರಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಲಿಬಿಯಾ, ದಕ್ಷಿಣ ಆಫ್ರಿಕಾ
* 25% ಸುಂಕ – ಭಾರತ, ಬ್ರೂನಿ, ಕಝಾಕಿಸ್ತಾನ್, ಮೊಲ್ಡೊವಾ, ಟುನೀಶಿಯಾ
* 20% ಸುಂಕ – ಬಾಂಗ್ಲಾದೇಶ, ಶ್ರೀಲಂಕಾ, ತೈವಾನ್, ವಿಯೆಟ್ನಾಂ
* 19% ಸುಂಕ – ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥೈಲ್ಯಾಂಡ್
* 18% ಸುಂಕ – ನಿಕರಾಗುವಾ
* 15% ಸುಂಕ – ಇಸ್ರೇಲ್, ಜಪಾನ್, ಟರ್ಕಿ, ನೈಜೀರಿಯಾ, ಘಾನಾ ಮತ್ತು ಇತರ ಹಲವು ದೇಶಗಳು
* 10% ಸುಂಕ – ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್ (ಯುಕೆ), ಫಾಕ್‌ಲ್ಯಾಂಡ್ ದ್ವೀಪಗಳು
ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್ 7ರಿಂದ ಭಾರತದ ಎಲ್ಲ ಆಮದು ಸರಕುಗಳಿಗೆ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ.