ಗುಡ್‌ನ್ಯೂಸ್‌ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್‌ ಸುಧೀರ್‌ – ಸೋನಲ್‌ ಮದುವೆ ಡೇಟ್‌ ಫಿಕ್ಸ್‌

Public TV
1 Min Read

ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಸೋನಲ್ ಮಂಥೆರೋ (Sonal Monterio) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ (Wedding) ಡೇಟ್ ಕೂಡ ಫಿಕ್ಸ್ ಆಗಿದೆ. ಇದೇ ಆಗಸ್ಟ್‌ನಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಇದನ್ನೂ ಓದಿ:ನನ್ನ ಸಲುವಾಗಿ ಮದ್ವೆ ಡೇಟ್‌ ಬದಲಾವಣೆ ಮಾಡೋದು ಬೇಡ ಅಂದಿದ್ದಾರೆ ದರ್ಶನ್‌: ತರುಣ್‌ ಸುಧೀರ್

ಇದೇ ಆಗಸ್ಟ್ 10, 11ರಂದು ತರುಣ್ ಮತ್ತು ಸೋನಲ್ ಮದುವೆ ಜರುಗಲಿದೆ. ದರ್ಶನ್ (Darshan) ಅವರೇ ತರುಣ್ ಮತ್ತು ಸೋನಲ್ ಮದುವೆಗೆ ಮುನ್ನುಡಿ ಬರೆದಿದ್ರಂತೆ. ಹಾಗಾಗಿ ಮದುವೆ ಡೇಟ್ ಮುಂದಕ್ಕೆ ಹಾಕಲು ತರುಣ್ ತೀರ್ಮಾನಿಸಿದ್ದರು. ಆದರೆ ಹಿರಿಯರ ಸಲಹೆ ಮತ್ತು ದರ್ಶನ್ ಒತ್ತಾಯ ಮೇರೆಗೆ ಮದುವೆಗೆ ಮುಂದಾಗಿದ್ದಾರೆ.

ತರುಣ್ ಮದುವೆ ವಿಚಾರ ಮೊದಲೇ ದರ್ಶನ್‌ಗೆ ತಿಳಿದಿತ್ತು. ಜೈಲಿನಲ್ಲಿರುವ ಹಿನ್ನಲೆ, ತನ್ನ ಕಾರಣಕ್ಕೆ ತರುಣ್ ಮದುವೆ ಡೇಟ್ ಮುಂದೂಡಬಾರದು ಎಂದು ಪತ್ನಿ ವಿಜಯಲಕ್ಷ್ಮಿ ಕಡೆಯಿಂದ ದರ್ಶನ್ ಹೇಳಿ ಕಳುಹಿಸಿದ್ದರು. ಇದೀಗ ಜೈಲಿಗೆ ಭೇಟಿ ಕೊಟ್ಟ ವೇಳೆ ಕೂಡ ಇದನ್ನೇ ದರ್ಶನ್, ತರುಣ್‌ಗೆ ಹೇಳಿ ಕಳುಹಿಸಿದ್ದಾರೆ. ಇದೀಗ ದರ್ಶನ್ ಇಚ್ಛೆಯಂತೆ ಆಗಸ್ಟ್‌ 10,11ರಂದು ತರುಣ್ ಮದುವೆ ಜರುಗಲಿದೆ.

ಅಂದಹಾಗೆ, ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ.

Share This Article