ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ

Public TV
2 Min Read

– ಸೋಮವಾರ ಸಿಎಂ ಬಂಡವಾಳ ಬಿಚ್ಚಿಡ್ತೀನಿ ಅಂದ್ರು ಬಿಎಸ್‍ವೈ

ಹುಬ್ಬಳ್ಳಿ: ಆಪರೇಷನ್ ಆಡಿಯೋ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಯೂಟರ್ನ್ ಹೊಡೆದಿದ್ದು, ಕುತಂತ್ರ ಮಾಡಿ ನನ್ನ ಬಳಿ ಶಾಸಕ ನಾಗನಗೌಡ ಪುತ್ರ ಶರಣಗೌಡರನ್ನು ಕಳಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ ವೈ ಆಪರೇಷನ್ ಕಮಲ ನಡೆಸುತ್ತಿರುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಸೋಮವಾರ ಸಿಎಂ ಬಂಡವಾಳ ಬಿಚ್ಚಿಡ್ತೀನಿ ಎಂದು ಬಿಎಸ್‍ವೈ ಹೇಳಿದ್ದಾರೆ.  ಇದನ್ನೂ ಓದಿ: ಬಿಎಸ್‍ವೈ ಆಪರೇಷನ್ ಆಡಿಯೋ ನಿಜ- ಸಾಬೀತಾಗದಿದ್ರೆ ರಾಜಕೀಯದಿಂದ ನಿವೃತ್ತಿ

ಆಡಿಯೋದಲ್ಲಿ ಸ್ಪೀಕರ್ ಸೇರಿದಂತೆ ನ್ಯಾಯಾಧೀಶರ ಹೆಸರು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಅಡ್ವೊಕೇಟ್ ಜನರಲ್ ಜೊತೆ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸ್ಪೀಕರ್ ಚರ್ಚೆ ನಡೆಸಿ ಸೋಮವಾರದ ಒಳಗಡೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಆದ್ರೆ ಇದೀಗ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸ್ಪೀಕರ್ ಈ ಸಂಬಂಧ ದೂರು ದಾಖಲಿಸುವ ಸಾಧ್ಯತೆ ಇದೆ. ಸದನ ಸಮಿತಿ ರಚಿಸಿ ಆಡಿಯೋ ಪ್ರಕರಣದ ಕುರಿತು ತನಿಖೆಗೆ ಆದೇಶ ಸಾಧ್ಯತೆಗಳಿವೆ. ಇದನ್ನೂ ಓದಿ: ಆಡಿಯೋದಲ್ಲಿರೋದು ಬಿಎಸ್‍ವೈ ಧ್ವನಿಯೆಂದು ನಾನು ಹೇಳಿಲ್ಲ- ಎಚ್‍ಡಿಕೆ

ಶನಿವಾರವಷ್ಟೇ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಾಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಚ್‍ಡಿ ಕುಮಾರಸ್ವಾಮಿಯವರು, ಬಜೆಟ್ ಗೂ ಮುನ್ನ ತಾವು ಬಿಡುಗಡೆ ಮಾಡಿದ್ದ ಆಡಿಯೋ ಬಗ್ಗೆ ಮಾತನಾಡಿದ್ದರು. ಈ ವೇಳೆ ಆಡಿಯೋದಲ್ಲಿರುವುದು ಯಡಿಯೂರಪ್ಪ ಅವರದ್ದೇ ಧ್ವನಿಯಾಗಿದೆ. ಒಂದು ವೇಳೆ ಇದು ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು. ಇದೀಗ ಮಂಜುನಾಥನ ಮುಂದೆ ನಿಂತು ಎಚ್‍ಡಿಕೆ ಮಾತನಾಡಿದ್ದಕ್ಕೆ ಬಿಎಸ್‍ವೈ ಬೆದರಿದ್ರಾ ಅನ್ನೋ ಪ್ರಶ್ನೆ ಮೂಡಿದ್ದು, ಪ್ರಕರಣದ ತನಿಖೆಗೆ ಬೆದರಿ ಯಡಿಯೂರಪ್ಪ ನಿಜ ಒಪ್ಪಿಕೊಂಡ್ರಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಎದ್ದಿದೆ.  ಇದನ್ನೂ ಓದಿ: ನನ್ನಿಂದ ಅಪಚಾರವಾಗಿದೆ – ಧರ್ಮಸ್ಥಳದಲ್ಲಿ ಸಿಎಂ ಎಚ್‍ಡಿಕೆ

ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿ ರಾಯಚೂರಿಗೆ ತೆರಳಿದ್ದ ಬಿಎಸ್‍ವೈ ಮಧ್ಯರಾತ್ರಿ ದೇವದುರ್ಗದ ಐಬಿಯಲ್ಲಿ ಕುಳಿತು ಯಾದಗಿರಿಯ ಗುರುಮಿಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರಿಗೆ ಕರೆ ಮಾಡಿ ಐಬಿಗೆ ಬರಲು ಹೇಳಿ ಡೀಲ್ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅದು ನಕಲಿ ಆಡಿಯೋ, ಸಾಬೀತಾದರೆ ರಾಜಕೀಯ ನಿವೃತ್ತಿ – ಬಿಎಸ್‍ವೈ ಸವಾಲು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *