ಬಿಜೆಪಿಯವ್ರು, ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ.. ಸಂವಿಧಾನವೇ ನಮ್ಮ ಧರ್ಮಗ್ರಂಥ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಸಂವಿಧಾನವೇ (Constitution) ನಮ್ಮ ಧರ್ಮ ಗ್ರಂಥ, ಬಿಜೆಪಿಯವರು (BJP) ಹಾಗೂ ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಭಾರತ ಸಂವಿಧಾನ ಹಾಗೂ ಐಕ್ಯತಾ ಸಮಾವೇಶಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅವರು, ಸಂವಿಧಾನದಲ್ಲಿ ಕೆಲವರಿಗೆ ನಂಬಿಕೆ, ಗೌರವ ಇಲ್ಲ. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ ಅಂತೇನಿಲ್ಲ, ಗೊತ್ತಿದ್ದೂ ದಾರಿ ತಪ್ಪಿಸುತ್ತಿದ್ದಾರೆ. ಯಾರು ದಾರಿ ತಪ್ಪಿಸುತ್ತಿದ್ದಾರೆ ಎಂದು ನನ್ನ ಬಾಯಿಯಿಂದ ಹೇಳಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ನಾನು ಲೋಕಸಭೆಗೆ ನಿಲ್ಲೋದಿಲ್ಲ: ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ

ನಮಗೆ ಸ್ಪಷ್ಟತೆ ಇದ್ದರೆ ದಾರಿ ತಪ್ಪಲು ಸಾಧ್ಯವಿಲ್ಲ. ನಮ್ಮ ಸ್ಥಿತಿಗೆ ಹಣೆಬರಹದ ಸಂಬಂಧ ಕಲ್ಪಿಸ್ತೀವಿ. ಹಣೆಬರಹ ಹಾಗೂ ಹಿಂದಿನ ಜನ್ಮ ಅನ್ನೋದೇನೂ ಇಲ್ಲ. ಈ ಜನ್ಮವೊಂದೇ ಗಟ್ಟಿ, ಪುನರ್ಜನ್ಮ ಇಲ್ಲ. ಮತ್ತೆ ಹುಟ್ಟಿ ಬರ್ತೀವಿ ಅನ್ನೋದು ಸುಳ್ಳು ಎಂದಿದ್ದಾರೆ.

ಸಂವಿಧಾನ ಜಾರಿಗೆ ಬಂದು 75 ವರ್ಷ ಆಗಿದೆ. ಈ 75ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ನಾವು ನಿರ್ಧರಿಸಿದ್ದೇವೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸಂವಿಧಾನ ಜಾಥಾ ನಡೀತಿದೆ. ಕಳೆದ ಜ.26 ರಿಂದ ಈ ಜಾಥ ಆರಂಭವಾಗಿದೆ. ಫೆ.24 ಹಾಗೂ 25 ಸಮಾವೇಶ ಇದೆ, ಹೆಸರಾಂತ ಭಾಷಣಕಾರರು ಬರಲಿದ್ದಾರೆ. ಚಿಂತಕರಾದ ಪ್ರೊ.ಅಶುತೋಷ್ ವಷ್ರ್ಣೇಯ್, ಮೇಧಾ ಪಾಟ್ಕರ್, ಡಾ.ಗಣೇಶ್ ದೇವಿ, ಸುಖದೇವ್ ಥೋರಟ್ ಸೇರಿ ಅನೇಕರು ಬರಲಿದ್ದಾರೆ. ಈ ಸಮಾವೇಶದಲ್ಲಿ ದೇಶದ ಸಮಸ್ಯೆಗಳು ಹಾಗೂ ಸಂವಿಧಾನಕ್ಕಿರುವ ಆತಂಕಗಳ ಬಗ್ಗೆ ಚರ್ಚೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಮಂಡನೆಯಾದ ಬಜೆಟ್‍ನ ಮೊದಲ ಪುಟದಲ್ಲೇ ಸಂವಿಧಾನದ ಪೀಠಿಕೆಯಲ್ಲಿ ಹಾಕಿಸಲಾಗಿದೆ. ಇದು ಇತಿಹಾಸಲ್ಲೇ ಮೊದಲ ಬಾರಿಗೆ ಬಜೆಟ್‍ನಲ್ಲಿ ಸಂವಿಧಾನದ ಪೀಠಿಕೆ ಉಲ್ಲೇಖ ಆಗಿರುವುದು. ಜನರಿಗೆ ಸಂವಿಧಾನದ ಮಹತ್ವ ಅರ್ಥ ಆಗಬೇಕು. 75 ವರ್ಷ ಆದರೂ ಇನ್ನೂ ಕೂಡ ಎಲ್ಲರಿಗೂ ಸಂವಿಧಾನದ ಹಕ್ಕುಗಳು ಸಿಕ್ಕಿಲ್ಲ. ಸಂವಿಧಾನಕ್ಕೆ ಯಾರೇ ಧಕ್ಕೆ ತರುವ ಪ್ರಯತ್ನ ಮಾಡಿದ್ರೂ ಜನರು ಅದನ್ನು ವಿಫಲಗೊಳಿಸಬೇಕು ಎಂದಿದ್ದಾರೆ.

ರಾಜಕೀಯ, ಸಾಮಾಜಿಕ ಅಸಮಾನತೆ ಇನ್ನೂ ಹೋಗಿಲ್ಲ, ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಜಾಗೃತಿ ಎಲ್ಲರಲ್ಲೂ ಬರಬೇಕು. ಸಂವಿಧಾನ ಏನ್ ಹೇಳುತ್ತೆ ಎಂದು ಎಲ್ಲರಿಗೂ ಗೊತ್ತಾಗಲಿ ಎಂದು ಈ ಜಾಥಾ ಮಾಡುತ್ತಿದ್ದೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಆಗ್ತಾ ಇದೆಯಾ? ಅದರ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು. ಅವಕಾಶ ವಂಚಿತರಿಗೆ ಅವಕಾಶ ಸಿಗಬೇಕು ಎಂದಿದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

Share This Article