ಬುರ್ಖಾ ಹಾಕಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು – ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಹೇರಿಕೆಗೆ ಯತ್ನ

Public TV
3 Min Read

ಮಂಗಳೂರು: ಕೋಮು ಸೂಕ್ಷ್ಮ ಜಿಲ್ಲೆ ಕಡಲನಗರಿ ಮಂಗಳೂರಿನಲ್ಲಿ ತಾಲಿಬಾನ್ ರೀತಿಯ ಸಂಸ್ಕೃತಿ ಹೇರಿಕೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ.

ಮುಸ್ಲಿಂ ಸಂಘಟನೆಯೊಂದರಿಂದ ಮಂಗಳೂರಿನಲ್ಲಿ ಹವಾ ಸೃಷ್ಟಿಸಲು ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳಲಾಗುತ್ತಿದೆ. ಬುರ್ಖಾ ಧರಿಸಿ ಹಿಂದೂ ಯುವಕರೊಂದಿಗೆ ಪಾರ್ಕ್, ಮಾಲ್, ಥೇಟರ್ ಸುತ್ತುವ ಯುವತಿಯರನ್ನು ಟಾರ್ಗೆಟ್ ಮಾಡಿ ಅವರಿಗೆ ಮುಸ್ಲಿಂ ಡಿಫೆನ್ಸ್ ಫೋರ್ಸ್(ಎಂಡಿಎಫ್) ಬೆದರಿಕೆ ಹಾಕಿದೆ.

ಹಿಜಬ್, ಬುರ್ಖಾ ಧರಿಸಿ ಹೊರಬರುವ ಯುವತಿಯರ ಮೇಲೆ ಎಂಡಿಎಫ್ ಕಣ್ಣಿಡುತ್ತಿದೆ. ಸಂಘಟನೆಗಳು ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ನಿಗೂಢವಾಗಿ ಕಾರ್ಯಚರಣೆಯನ್ನು ಮಾಡುತ್ತಿವೆ. ಈ ಸಂಘಟನೆಗಳು ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿದ್ದು, ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದೆ. ಈ ಯುವತಿಯರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯ ಸಂದೇಶವನ್ನು ಹರಿ ಬಿಡಲಾಗಿದೆ.  ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

ಪೋಸ್ಟ್‌ನಲ್ಲಿ ಏನಿದೆ?
ಸಿಟಿ ಸೆಂಟರನ ಕಾರ್ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಬುರ್ಖಾ ಹಾಕಿಕೊಂಡು ನಿಮ್ಮ ಅಸಭ್ಯ ವರ್ತನೆಗಳನ್ನು ಕಂಡು ನಮ್ಮ ಕಾರ್ಯಕರ್ತರು ಬುದ್ಧಿ ಮಾತು ಹೇಳಿ ಪೋಷಕರಿಗೂ ತಿಳಿಸಿ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಆದ್ದರಿಂದ ಇನ್ನೂ ಮುಂದೆ ಇಂತಹ ಅಹಿತಕರ ಘಟನೆ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ, ಧರ್ಮದೇಟು ಕೊಟ್ಟು ಯಾವುದೇ ಮುಲಾಜಿಲ್ಲದೆ ಕಾರ್ಯ ನಿರ್ವಹಿಸಳಿದ್ದೇವೆ. ಆದ್ದರಿಂದ ಪೋಷಕರೆ ನಿಮ್ಮ-ನಿಮ್ಮ ಮಕ್ಕಳ ಚಲನವಲನಗಳನ್ನು ಪರಿಶೀಲನೆ ಮಾಡಿ ಕಾಲೇಜ್‍ಗೆ ಎಷ್ಟು ಗಂಟೆಗೆ ತಲಾಪುತ್ತಾಳೆ, ಕಾಲೇಜಿನಿಂದ ಮನೆಗೆ ಎಷ್ಟು ಗಂಟೆಗೆ ತಲುಪುತ್ತಾಳೆ ಎಂದು ಗಮನಿಸಿ ಎಂಬ ಮುಸ್ಲಿಂ ಯುವತಿಯರ ಮೇಲೆ ನಿಯಂತ್ರಣ ಹೇರುವಂತಹ ಪೋಸ್‍ಗಳನ್ನು ಎಂಡಿಎಫ್ ಹಾಕುತ್ತಿದೆ.

ಪೊಲೀಸರು ಹೇಳಿದ್ದೇನು?
ಎಂಎಫ್‍ಡಿ ಹಾಗೂ ಮಂಗಳೂರು ಮುಸ್ಲಿಂ ಪೇಜ್ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಸೋಶಿಯಲ್ ಮೀಡಿಯಾ ಮೇಲೆ ತೀವ್ರ ನಿಗಾವನ್ನು ಇಡಲು ಪ್ರತ್ಯೇಕ ತಂಡ ರಚನೆವನ್ನು ರಚಿಸಲಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಡಿಸಿಪಿ ಹರಿರಾಂ ಶಂಕರ್ ನೇತತ್ವದಲ್ಲಿ 6 ಪೊಲೀಸ್ ಅಧಿಕಾರಿಗಳ ತಂಡ ರಚಿಸಿದ್ದಾರೆ. ಈ ತಂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಗಮನವನ್ನು ಹರಿಸುತ್ತಿದೆ. ಈ ಹಿನ್ನೆಲೆ ಕಳೆದ 3 ವರ್ಷಗಳಿಂದ ನಾನಾ ಪ್ರಕರಣಗಳಲ್ಲಿ ಭಾಗಿಯಾದ ಸಂಘಟನೆ, ವ್ಯಕ್ತಿಗಳ ಕುರಿತು ಈ ತಂಡ ವಿಚಾರಣೆ ಮಾಡುತ್ತಿದೆ.

ಈಗಾಗಲೇ ಈ ರೀತಿ ಸೋಶಿಯಲ್ ಮೀಡಿಯಾ ಮುಖಾಂತರ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿರುವರನ್ನು ಬಂಧಿಸಲಾಗುತ್ತಿದೆ. ಟ್ರೋಲ್ ಕಿಂಗ್ 193 ಎಂಬ ಇನ್‍ಸ್ಟಾಗ್ರಾಮ್ ಪೇಜ್‍ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಮಾತನಾಡಿದ್ದು, ಮಂಗಳೂರು ಕೊಣಾಜೆ ಮೂಲದ ಅಪ್ರಾಪ್ತ ಬಾಲಕ ಬೆಂಗಳೂರಿನ ತರಕಾರಿ ಮಂಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದೇವಸ್ಥಾನವೊಂದರ ಗೋಪುರದ ಮೇಲೆ ಮುಸ್ಲಿಂ ಜನಾಂಗದ ಹಸಿರು ಬಾವುಟ ಇರುವಂತೆ ಎಡಿಟ್ ಮಾಡಿದ ವೀಡಿಯೋಗಳನ್ನು ಪೇಜ್‍ನಲ್ಲಿ ಅಪ್ಲೋಡ್ ಮಾಡಿದ್ದ. ಹೀಗಾಗಿ ಆತನನ್ನು ವಶಕ್ಕೆ ಪಡೆದು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ನೀಚರು, ನಿರ್ಲಜ್ಯರಿಂದ ಪಾಕಿಸ್ತಾನ ಪರ ಘೋಷಣೆ: ಮುತಾಲಿಕ್ 

ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನಿಗೆ ಯಾರಿಂದಲಾದರೂ, ಯಾವುದಾದರೂ ಸಂಘಟನೆಯ ಬೆಂಬಲವಿದೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಬುರ್ಖಾ ಹಾಕಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮಾಡಿದರೆ ದಾಳಿ ಮಾಡಿ ಧರ್ಮದೇಟು ನೀಡುತ್ತೇವೆ ಎಂದು ಬೆದರಿಕೆ ಹಾಕಿದ ತಂಡದ ವಿರುದ್ಧವೂ ತನಿಖೆ ಶುರು ಮಾಡಲಾಗಿದೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *