ಗ್ರಾ.ಪಂ ಸದಸ್ಯನ ಕಿಡ್ನ್ಯಾಪ್‌ಗೆ ಯತ್ನಿಸಿ ವಿಫಲ – ಚಾಕು ಇರಿದು ದುಷ್ಕರ್ಮಿಗಳು ಎಸ್ಕೇಪ್

Public TV
1 Min Read

ರಾಮನಗರ: ಗ್ರಾ.ಪಂ ಸದಸ್ಯನ ಅಪಹರಣಕ್ಕೆ ಯತ್ನಿಸಿ ವಿಫಲವಾದ ಹಿನ್ನೆಲೆ ಚಾಕು ಇರಿದು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಚನ್ನಪಟ್ಟಣ (Channapatana) ತಾಲೂಕಿನ ಮಳೂರು ಕೆರೆ ಏರಿ ಮೇಲೆ ನಡೆದಿದೆ.

ಮಳೂರು (Maluru) ಗ್ರಾ.ಪಂ ಸದಸ್ಯ ವೆಂಕಟೇಶ್ ಅವರನ್ನು ಕಿಡ್ನ್ಯಾಪ್‌ ಮಾಡಲು ದುಷ್ಕರ್ಮಿಗಳು ಯತ್ನಿಸಿ ವಿಫಲವಾಗಿದ್ದಾರೆ. ಇದೇ ತಿಂಗಳ 11ರಂದು ಮಳೂರು ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇರುವ ಹಿನ್ನೆಲೆ, ಗ್ರಾ.ಪಂ ಸದಸ್ಯ ವೆಂಕಟೇಶ್ ಅವಿಶ್ವಾಸದ ಪರ ಇದ್ದದ್ದಕ್ಕೆ ಕಿಡ್ನಾಪ್ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಎಡ ಸಮುದಾಯಕ್ಕೆ 7% ಒಳಮೀಸಲಾತಿ ಕೊಡಬೇಕು – ಆಂಜನೇಯ

ಬೆಳಗ್ಗೆ ವೆಂಕಟೇಶ್ ಅವರು ಮಗುವನ್ನ ಶಾಲೆಗೆ ಬಿಟ್ಟು ವಾಪಸ್ಸಾಗುವಾಗ ಮಳೂರು ಕೆರೆ ಏರಿ ಮೇಲೆ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ದಾರೆ. ಈ ವೇಳೆ ವೆಂಕಟೇಶ್ ಕಾರು ಹತ್ತದೇ ಕೂಗಾಡಿದ್ದರಿಂದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಜನ ಓಡಿಬಂದಿದ್ದರು. ಈ ವೇಳೆ ದುಷ್ಕರ್ಮಿಗಳು ವೆಂಕಟೇಶ್ ಅವರಿಗೆ ಚಾಕು ಇರಿದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ – ಪಾಲಿಶ್‌ ನೀಡಿ ಹೆಚ್ಚಿನ ಬೆಲೆಗೆ ಮಾರಾಟ?

ಗಾಯಾಳು ವೆಂಕಟೇಶ್ ಅವರಿಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಮಳೂರು ಗ್ರಾ.ಪಂ ಅಧ್ಯಕ್ಷ ಚೇತನ್ ಹಾಗೂ ಮಳೂರಿನ ಕಾಂಗ್ರೆಸ್ ಮುಖಂಡ ರಾಜೇಶ್ ವಿರುದ್ಧ ವೆಂಕಟೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಹಮತದಿಂದ ಒಳಮೀಸಲಾತಿ ಹಂಚಿಕೆ – ಪರಮೇಶ್ವರ್ ಹೇಳಿಕೆಗೆ ಗೋವಿಂದ ಕಾರಜೋಳ ಆಕ್ರೋಶ

ಘಟನಾ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು (Channapatana Rural Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share This Article