ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳಿಗೆ ಹುಬ್ಬಳ್ಳಿ (Hubballi) ಪೊಲೀಸರು (Police) ಗುಂಡಿನ ರುಚಿ ತೋರಿಸಿದ್ದಾರೆ.
ಮಲ್ಲಿಕ್ ಜಾನ್ ಕೊಲೆಯ ಪ್ರಮುಖ ಆರೋಪಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯ ಮತ್ತು ಮಹ್ಮದ್ ಶೇಖ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಈ ಇಬ್ಬರು ಸೇರಿ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನ.13ರ ರಾತ್ರಿ ಮಹಮ್ಮದ್ ಮಲ್ಲಿಕ್ ಜಾನ್‌ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದರು. ಈ ಇಬ್ಬರು ಆರೋಪಿಗಳು ಸೆಟಲ್ಮೆಂಟ್‍ನ ಶ್ಯಾಮ್ ಜಾದವ್ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಧಾರವಾಡ | ಒಂದೇ ದಿನ ಇಬ್ಬರು ಪೊಲೀಸರು ಸಾವು – ಕಂಬನಿ ಮಿಡಿದ ಅಧಿಕಾರಿಗಳು
ಎಂಡಿ ದಾವೂದ್ ಮತ್ತು ಶ್ಯಾಮ್ ಜಾದವ್ ಗುಂಪಿನ ನಡುವೆ ಆಗಾಗ ಗ್ಯಾಂಗ್ ವಾರ್ ನಡೆಯುತ್ತಿತ್ತು. ಅದರ ಮುಂದುವರಿದ ಭಾಗವಾಗಿ ಮಹಮ್ಮದ್ ಮಲಿಕ್ ಜಾನ್ ಹತ್ಯೆ ಮಾಡಲಾಗಿತ್ತು. ಪ್ರಕರಣದ ಇನ್ನುಳಿದ ಆರೋಪಿಗಳು ಇರುವ ಜಾಗ ತೋರಿಸುವುದಾಗಿ ಕರದುಕೊಂಡು ಹೋಗಿದ್ದ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ಮೂವರು ಸಿಬ್ಬಂದಿಗೆ ಗಾಯವಾಗಿದೆ. ಇನ್ಸ್‌ಪೆಕ್ಟರ್ ಎಸ್.ಆರ್ ನಾಯಕ್, ಪೇದಗಳಾದ ನೂರ್ ಅಹ್ಮದ್ ನೀಲಗಾರ, ಚಲುವಾದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 76ರ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ – ಹುಬ್ಬಳ್ಳಿಯಲ್ಲಿ ಫಸ್ಟ್ ಟೈಂ ಬರೋಬ್ಬರಿ 1 ಕೋಟಿ ಪಂಗನಾಮ
