ಎಡನೀರು ಮಠದ ಶ್ರೀಗಳ ಕಾರಿನ ಮೇಲೆ ಅನ್ಯ ಕೋಮಿನ ಯುವಕರಿಂದ ದಾಳಿ

Public TV
1 Min Read

ಮಂಗಳೂರು: ಕಾಸರಗೋಡಿನ (Kasaragodu) ಎಡನೀರು ಮಠದ ಶ್ರೀಗಳ (Edneer Mutt) ಕಾರಿನ (Car) ಮೇಲೆ ಅನ್ಯ ಮತೀಯ ಯುವಕರ ಗುಂಪು ದಾಳಿ ನಡೆಸಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

ಸಚ್ಚಿದಾನಂದ ಭಾರತೀ ಸ್ವಾಮಿಜಿ ಕಾರ್ಯಕ್ರಮವೊಂದನ್ನು ಮುಗಿಸಿ ಕಾಸರಗೋಡಿನ ಬೋವಿಕಾನ – ಇರಿಯಣ್ಣೆ ಮಾರ್ಗದಲ್ಲಿ ತೆರಳುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಕಾರಿನ ಗಾಜಿಗೆ ದೊಣ್ಣೆಯಿಂದ ಬಡಿದಿದ್ದಾರೆ.

ಘಟನೆಯನ್ನು ಹಿಂದೂ ಪರ ಸಂಘಟನೆಗಳು ಖಂಡಿಸಿವೆ. ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಕಾಸರಗೋಡಿನ ಬೋವಿಕಾನದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಅನ್ಯ ಕೋಮಿನ ಯುವಕರಿಂದ ಈ ದಾಳಿ ನಡೆದಿದೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಸ್ವಾಮೀಜಿಯವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ.

Share This Article