ಬೈಕ್‌ನಲ್ಲಿ ತಲವಾರ್ ಹಿಡಿದು ಸಾಗ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಹಲ್ಲೆ – ಓರ್ವ ವಶಕ್ಕೆ

1 Min Read

ಮಂಗಳೂರು: ಬೈಕ್‌ನಲ್ಲಿ ತಲವಾರ್ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿದ ಘಟನೆ ಮಂಗಳೂರು (Mangaluru) ಹೊರವಲಯದ ಬಜಪೆಯಲ್ಲಿ (Bajpe) ನಡೆದಿದೆ.

ಬಜಪೆ ಸಮೀಪದ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಪೊಲೀಸರು ಓರ್ವ ಆರೋಪಿ ಸಿನಾನ್‌ನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಕಬಡ್ಡಿಯಲ್ಲಿ ಭಾರತವೇ ವಿಶ್ವ ಚಾಂಪಿಯನ್‌ – ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಮಹಿಳೆಯರು

ಬಜಪೆ ಬಳಿ ನಾಲ್ವರು ಆರೋಪಿಗಳು ಬೈಕ್‌ನಲ್ಲಿ ತೆರಳುವಾಗ ತಲವಾರ್ ಹಿಡಿದು ಸಾಗುತ್ತಿದ್ದರು. ಈ ವೇಳೆ ಅಖಿಲೇಶ್ ವಿಡಿಯೋ ಮಾಡುತ್ತಿದ್ದರು. ಇದನ್ನು ಕಂಡ ಆರೋಪಿಗಳು ಅಖಿಲೇಶ್ ಮೇಲೆ ತಲ್‌ವಾರ್‌ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಹೋಗುವಾಗ ಆರೋಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಹಲ್ಲೆಗೊಳಗಾದ ಗಾಯಾಳುವಿಗೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನ ಹಿಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ:ವಿಜಯ್ ಸೇತುಪತಿ ಹೊಸ ಸಿನಿಮಾದ ಶೂಟಿಂಗ್ ಮುಕ್ತಾಯ: ಪುರಿ ನಿರ್ದೇಶನದ ಸಿನಿಮಾ

Share This Article