ಡಿಕೆಸು ನಾಮಪತ್ರ ಸಲ್ಲಿಕೆಗೆ ತೆರಳಿದ್ದಕ್ಕೆ `ಕೈ’ ಮುಖಂಡನಿಗೆ ಚಾಕು ಇರಿತ – ಆರೋಪ

Public TV
1 Min Read

ತುಮಕೂರು: ರಾಜಕೀಯ ದ್ವೇಷದಿಂದ ಯೂತ್ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿಗೆ ಚಾಕು ಇರಿದ ಪ್ರಕರಣ ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರದಲ್ಲಿ ನಡೆದಿದೆ. ಡಿ.ಕೆ ಸುರೇಶ್  (D.K Suresh) ನಾಮಪತ್ರ ಸಲ್ಲಿಕೆಗೆ ತೆರಳಿದ್ದಕ್ಕೆ ಚಾಕು ಇರಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ ಎಂದು ತಿಳಿದು ಬಂದಿದೆ. ಚಂದ್ರ, ಜಗದೀಶ್ ಹಾಗೂ ಸುನೀಲ್ ಎಂಬ ಮೂವರು, ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಯಾಕೆ ತೆರಳಿದ್ದೆ ಎಂದು ಕೀರ್ತಿಯವರ ಬಳಿ ಜಗಳ ಆರಂಭಿಸಿದ್ದಾರೆ. ಬಳಿಕ ಮೂವರು ಸೇರಿ ಕೀರ್ತಿ ಮೇಲೆ ಚಾಕು, ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹೆಂಡ್ತಿಯನ್ನ ಕ್ರೂರವಾಗಿ ಕೊಂದು, 200 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಹಂತಕ!

ಚಾಕು ಇರಿತದಿಂದ ಗಾಯಗೊಂಡ ಕೀರ್ತಿಯನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಕೀಯ ವೈಷಮ್ಯ ಹಿನ್ನೆಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಯನಾಡ್ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ ಪ್ರಕರಣ – 29 ಗಂಟೆಗಳ ಕಾಲ ನಿರಂತರ ಹಲ್ಲೆ

Share This Article