ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ರಾಹುಲ್, ಸಿದ್ದರಾಮಯ್ಯ ತಮ್ಮ ನಿಲುವು ತಿಳಿಸಲಿ – ಛಲವಾದಿ

Public TV
1 Min Read

ಬೆಂಗಳೂರು: ಬಾಂಗ್ಲಾದೇಶದಲ್ಲಿ(Bangladesh) ಇಸ್ಕಾನ್ (ISKCON)ಸಂಸ್ಥೆ ಬ್ಯಾನ್ ಮಾಡಲು ಹೊರಟಿರುವುದು ಮತ್ತು ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ನಿಲುವು ತಿಳಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ, ಅಟ್ಟಹಾಸ ಮಿತಿ ಮೀರಿದೆ. ಮೋದಿ ಸರ್ಕಾರ ಈಗಾಗಲೇ ಬಾಂಗ್ಲಾದೇಶಕ್ಕೆ ಹಿಂದೂಗಳಿಗೆ ತೊಂದರೆ ಕೊಡದಂತೆ ಚಿನ್ಮಯ್‌ ಕೃಷ್ಣದಾಸ್ ಬಿಡುಗಡೆಗೆ ಆಗ್ರಹ ಮಾಡಿದ್ದಾರೆ. ಇಸ್ಕಾನ್ ಅನುಮತಿ ರದ್ದು ಮಾಡಬೇಕು ಎಂಬ ಬಾಂಗ್ಲಾದೇಶ ಸರ್ಕಾರದ ಮನವಿಯನ್ನ ಹೈಕೋರ್ಟ್ ತಿರಸ್ಕಾರ ಮಾಡಿದೆ. ಈ ವಿಚಾರದಲ್ಲಿ ಮಮತ ಬ್ಯಾನರ್ಜಿ ಕೇಂದ್ರದ ಪರವಾಗಿ ಇರುತ್ತೇನೆ ಅಂತ ಹೇಳಿದ್ದಾರೆ. ಬ್ಯಾನರ್ಜಿ ಮಾತನ್ನ ನಾನು ಸ್ವಾಗತ ಮಾಡುತ್ತೇನೆ. ಈ ವಿಚಾರದಲ್ಲಿ ಕಾಂಗ್ರೆಸ್ ನಡೆ ಏನು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಇರೋ ಕೆಲಸ ಮೊದಲು ಮಾಡಲಿ, ರಾಜ್ಯಪಾಲರ ಕೆಲಸ ಯಾಕೆ ಕಡಿತ ಮಾಡ್ತೀರಾ? – ಅಶ್ವಥ್ ನಾರಾಯಣ ಕಿಡಿ

 

ರಾಹುಲ್ ಗಾಂಧಿ ನಾನು ಹಿಂದು ಪರ ಅಂತಾರೆ ಯಾಕೆ ಈ‌ ಬಗ್ಗೆ ಮಾತಾಡಿಲ್ಲ. ನಮ್ಮ ರಾಜ್ಯ ಸರ್ಕಾರ ಯಾಕೆ ಇದರ ಬಗ್ಗೆ ಮಾತಾಡಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧ ಸರ್ಕಾರ. ಇಂದೇ ಸಿದ್ದರಾಮಯ್ಯ ಅವರು ಈ‌ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಕೇಂದ್ರದ ನಿಲುವು ನಾವು ಬೆಂಬಲಿಸಬೇಕು ಅಂತ ಆಗ್ರಹ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಯಾಕೆ ತಟಸ್ಥವಾಗಿದೆ. ಕಾಂಗ್ರೆಸ್ ನಡೆ ಸಂಶಯವಾಗಿದೆ. ತುಷ್ಟೀಕರಣದ ನಡೆಯಿಂದ ಬಾಂಗ್ಲಾದೇಶ, ಮತ್ತೊಂದು ಪಾಕಿಸ್ತಾನದ ಕವಲು ರಾಜ್ಯದಲ್ಲಿ ಒಡೆಯೋ ಸುಳಿವು ಸಿಗುತ್ತಿದೆ. ಕೇಂದ್ರ ಸರ್ಕಾರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವ್ಯವಸ್ಥೆಯನ್ನ ಕಡಿವಾಣ ಹಾಕಲು ಕ್ರಮವಹಿಸಬೇಕು. ದೇಶದ ಎಲ್ಲಾ ರಾಜ್ಯಗಳು ಕೇಂದ್ರಕ್ಕೆ ಬೆಂಬಲಕ್ಕೆ ನಿಲ್ಲಬೇಕು. ಚಿನ್ಮಯ ಕೃಷ್ಣದಾಸ್ ರನ್ನ ಬಿಡುಗಡೆ ಮಾಡಬೇಕು. ಬಾಂಗ್ಲಾದೇಶದಲ್ಲಿ‌ ಇರುವ ಹಿಂದೂಗಳ ರಕ್ಷಣೆಯಾಬೇಕು. ಕಾಂಗ್ರೆಸ್ ನಿಲುವು ಏನು ಅಂತ ತಿಳಿಸಬೇಕು ಅಂತ ಆಗ್ರಹ ಮಾಡಿದರು.

 

Share This Article