ಅಲ್ಲು ಅರ್ಜುನ್‌ಗೆ ‘ಜವಾನ್’ ಡೈರೆಕ್ಟರ್ ಆ್ಯಕ್ಷನ್ ಕಟ್

Public TV
1 Min Read

ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರ ಮುಂಬರುವ ಪ್ರಾಜೆಕ್ಟ್ ಬಗ್ಗೆ ಸಖತ್ ಸುದ್ದಿ ಆಗುತ್ತಿದೆ. ‘ಜವಾನ್’ (Jawan) ಡೈರೆಕ್ಟರ್ ಅಟ್ಲೀ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಇದನ್ನೂ ಓದಿ:ಮಕ್ಕಳ ಕಲ್ಯಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ರಣ್‌ಬೀರ್ ಕಪೂರ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೆ (Sharukh Khan) ಅಟ್ಲೀ ನಿರ್ದೇಶನ ಮಾಡಿದ ಮೇಲೆ ಅವರ ರೇಂಜ್ ಬದಲಾಗಿದೆ. ನಿರ್ದೇಶನದ ಮೊದಲ ಹಿಂದಿ ಸಿನಿಮಾ ಜವಾನ್ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ಜವಾನ್ ಸಕ್ಸಸ್ ಬೆನ್ನಲ್ಲೇ ಮುಂದಿನ ಚಿತ್ರಕ್ಕೆ ಅಲ್ಲು ಅರ್ಜುನ್ ಜೊತೆ ಅಟ್ಲೀ (Atlee) ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.

ಹೈದರಾಬಾದ್‌ಗೆ ತೆರಳಿ ಅಲ್ಲು ಅರ್ಜುನ್‌ಗೆ (Allu Arjun) ಕಥೆ ಹೇಳಿ ಬಂದಿದ್ದಾರಂತೆ ಅಟ್ಲೀ. ಇಬ್ಬರೂ ಕೂಡ ಹೊಸ ಪ್ರಾಜೆಕ್ಟ್ ಬಗ್ಗೆ ಗ್ರೀನ್ ಸಿಗ್ನಲ್ ಕೊಡದೇ ಗಪ್‌ಚುಪ್ ಆಗಿದ್ದಾರೆ. ‘ಜವಾನ್’ (Jawan) ಸಿನಿಮಾಗಿಂತ ವಿಭಿನ್ನ ಕಥೆಯನ್ನೇ ಅಟ್ಲೀ ರೆಡಿ ಮಾಡಿದ್ದಾರಂತೆ.‌ ಮೂಲಗಳ ಪ್ರಕಾರ, ಪುಷ್ಪ 2 ನಂತರ ಅಟ್ಲೀ ಜೊತೆ ಅಲ್ಲು ಅರ್ಜುನ್‌ ಸಿನಿಮಾ ಮಾಡ್ತಾರೆ ಅನ್ನೋದು ಇನ್‌ಸೈಡ್‌ ಸುದ್ದಿ.

ಒಂದು ವೇಳೆ ಅಟ್ಲೀ ಜೊತೆ ಕೈಜೋಡಿಸಿದ್ರೆ ಇಬ್ಬರ ಕಾಂಬಿನೇಷನ್‌ ಹೇಗೆ ಮೂಡಿ ಬರಬಹುದು ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಮೂಡಿದೆ.

Share This Article