ಸೀತಾ ಔರ್ ಗೀತಾ ಚಿತ್ರವನ್ನು 25 ಬಾರಿ ವೀಕ್ಷಿಸಿದ್ದ ವಾಜಪೇಯಿ!

Public TV
1 Min Read

ನವದೆಹಲಿ: ಅಟಲ್ ಬಿಹಾರಿ ಕೇವಲ ರಾಜಕಾರಣಿಯಲ್ಲ. ಕವಿ, ಪತ್ರಕರ್ತರಾಗಿದ್ದ ಅವರು ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

ಸಾಹಿತ್ಯ, ಸಂಗೀತವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಾಜಪೇಯಿ ಅವರು, ಹೇಮಾಮಾಲಿನಿ ಅವರ ಮೇಲೆ ಬಹಳ ಅಭಿಮಾನವಿತ್ತು. ಅದರಲ್ಲೂ ಕನಸಿನ ಕನ್ಯೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ‘ಸೀತಾ ಔರ್ ಗೀತಾ’ ಚಲನಚಿತ್ರವನ್ನು ಅವರು ಬರೋಬ್ಬರಿ 25 ಬಾರಿ ವೀಕ್ಷಿಸಿದ್ದರು.

ಹೇಮಾಮಾಲಿನಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ನಾನು ವಾಜಪೇಯಿ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಒಮ್ಮೆ ಅವರನ್ನು ಭೇಟಿಯಾಗಬೇಕು ಎಂದು ಅಧಿಕಾರಿಗಳನ್ನು ಕೇಳಿಕೊಂಡಿದ್ದೆ. ಅವರನ್ನು ನೋಡಲು ನಾನು ಹೋದಾಗ ಬಹಳ ಮುಜುಗರದಿಂದಲೇ ಮಾತನಾಡಿದ್ದರು ಎಂದು ಆ ಕ್ಷಣವನ್ನು ಹಂಚಿಕೊಂಡಿದ್ದರು.

1972 ರಲ್ಲಿ ನಾನು ಅಭಿನಯಿಸಿದ ಸೀತಾ ಔರ್ ಗೀತಾ ಸಿನಿಮಾವನ್ನು ಅವರು 25 ಬಾರಿ ವೀಕ್ಷಿಸಿದ್ದರು. ನನ್ನ ಅಭಿಮಾನಿಯಾಗಿದ್ದ ಕಾರಣಕ್ಕೆ ಅವರು ಮುಜುಗರಂದಿಂದಲೇ ಮಾತನಾಡಿರಬಹುದು ಎಂದು ಹೇಮಾಮಲಿನಿ ತಿಳಿಸಿದ್ದರು.

ಅಟಲ್ ನಿಧನಕ್ಕೆ ಕಂಬನಿ ಮಿಡಿದ ಹೇಮಾಮಾಲಿನಿ, ವಿನೋದ್ ಖನ್ನಾ ಅವರಿಂದ ನನಗೆ ಅಟಲ್ ಬಿಹಾರಿ ವಾಜಪೆಯಿ ಅವರ ಪರಿಚಯವಾಯಿತು. ನಾನು ಬಿಜೆಪಿಗೆ ಸೇರಲು ಅಟಲ್ ಕಾರಣ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

2003 ರಿಂದ 2009 ರವರೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ಅವರು 2014ರಲ್ಲಿ ಉತ್ತರ ಪ್ರದೇಶದ ಮಥುರಾ ಲೋಕಸಭೆಯಿಂದ ಸ್ಪರ್ಧಿಸಿ ಗೆದ್ದಿದ್ದರು.

Share This Article
Leave a Comment

Leave a Reply

Your email address will not be published. Required fields are marked *