ಕಿನ್ಶಾಶಾ: ಆಗ್ನೇಯ ಕಾಂಗೋದ (Congo) ತಾಮ್ರದ ಗಣಿಯಲ್ಲಿ (Copper Mine) ಸೇತುವೆ ಕುಸಿದು 40ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಲುವಾಲಾಬಾ ಪ್ರಾಂತ್ಯದ ಕಲಾಂಡೊ ಸ್ಥಳದಲ್ಲಿ ಕುಸಿತ ಸಂಭವಿಸಿದೆ. ಸಾಮಾನ್ಯವಾಗಿ ಈ ಸ್ಥಳದಲ್ಲಿ ಪ್ರತಿದಿನ ಹೆಚ್ಚಿನ ಜನರು ಕಾರ್ಯನಿರ್ವಹಿಸುತ್ತಾರೆ. ಕುಸಿತದ ಪರಿಣಾಮ 40ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: QPL ಸೀಸನ್ 2: ಶಿವಮೊಗ್ಗ ಕ್ವೀನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ
ಮೂಲಗಳ ಪ್ರಕಾರ, ಗಣಿಗಾರಿಕೆ ಪ್ರದೇಶದಲ್ಲಿ ಮಿಲಿಟರಿ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಅಲ್ಲಿದ್ದವರು ಭಯಭೀತರಾಗಿ ಓಡಿಹೋಗಲು ಪ್ರಾರಂಭಿಸಿದರು. ಕಿರಿದಾದ ಸೇತುವೆ ಮೇಲೆ ಜನ ಓಡಿಹೋಗುವಾಗ ಸೇತುವೆ ಕುಸಿದು ಅವಘಡ ಸಂಭವಿಸಿದೆ.
ಈ ಪ್ರದೇಶದಲ್ಲಿ ಕಾಪರ್‌ನ ಉಪ ಉತ್ಪನ್ನವಾದ ಕೋಬಾಲ್ಟ್ ಉತ್ಪಾದನೆಯಲ್ಲಿ ಶೇ.70ರಷ್ಟು ಪಾಲು ಕಾಂಗೋ ದೇಶದಿಂದ ಜಗತ್ತಿಗೆ ಪೂರೈಕೆ ಆಗುತ್ತದೆ.ಇದನ್ನೂ ಓದಿ: ಬಿಹಾರ ವಿಧಾನಸಭೆಯ ವಿಪಕ್ಷ ನಾಯಕನಾಗಿ ತೇಜಸ್ವಿ ಯಾದವ್ ಆಯ್ಕೆ
