ಭಾರತದ ಸೇನೆ ಸೇರಿದ ಐಎನ್‍ಎಸ್ ವಿಶಾಖಪಟ್ಟಣ ನೌಕೆ – ಚೀನಾ, ಪಾಕಿಸ್ತಾನಕ್ಕೆ ನಡುಕ

Public TV
1 Min Read

ನವದೆಹಲಿ: ಕರಾವಳಿ ರಕ್ಷಣೆಗಾಗಿ ಐಎನ್‍ಎಸ್ ವಿಶಾಖಪಟ್ಟಣ ನೌಕೆ ಮುಂಬೈನಲ್ಲಿ ಕರ್ತವ್ಯಕ್ಕೆ ಮರಳಿದೆ. ಇದು ಭಾರತ ರಕ್ಷಣಾ ಪಡೆಗಳ ಮೊದಲ ಸ್ಟೆಲ್ತ್ ಗೈಡೆಡ್ ಮಿಸೈಡ್ ಡೆಸ್ಟ್ರಾಯರ್ ಆಗಿರೋದು ವಿಶೇಷವಾಗಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಐಎನ್‍ಎಸ್ ವಿಶಾಖಪಟ್ಟಣವನ್ನು ಲೋಕಾರ್ಪಣೆ ಮಾಡಿದರು. ಮುಂಬೈನ ಮಜಂಗಾವ್ ಡಾಕ್ ಯಾರ್ಡ್‍ನಲ್ಲಿ ನಿರ್ಮಿಸಿದ ಐಎನ್‍ಎಸ್ ವಿಶಾಖಪಟ್ಟಣ ನೌಕೆಯಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಸೇರಿ ಹಲವು ಮಾದರಿಯ ಕ್ಷಿಪಣಿಗಳನ್ನು ಪ್ರಯೋಗಿಸಬಹುದಾಗಿದೆ. ಈ ನೌಕೆಯ ಚಲನವನಗಳನ್ನು ಶತ್ರುದೇಶಗಳ ರಾಡಾರ್‌ಗಳು ಗುರುತಿಸದೇ ಇರುವ ರೀತಿಯ ತಂತ್ರಜ್ಞಾನವನ್ನು ಬಳಕೆ ಮಾಡಿದ್ದಾರೆ. ಜಲಂತಾರ್ಗಾಮಿಗಳನ್ನು ಕೂಡ ಗುರುತಿಸಿ ದಾಳಿ ನಡೆಸಲು ಅಗತ್ಯವಾದ ಪ್ರಬಲ ಟೋರ್ಪೆಡೋಗಳನ್ನು ಇದಕ್ಕೆ ಅಳವಡಿಸಲಾಗಿದೆ. ಇದನ್ನೂ ಓದಿ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೈತ್ರಿ : ಓವೈಸಿ

ಎಡರು ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳು ಕೂಡ ಇದರಲ್ಲಿ ಸದಾ ಸನ್ನದ್ಧವಾಗಿರುತ್ತವೆ. ಐಎನ್‍ಎಸ್ ವಿಶಾಖಪಟ್ಟಣ ಲೋಕಾರ್ಪಣೆ ಮಾಡಿ ಮಾತನಾಡಿದ ರಕ್ಷಣಾ ಸಚಿವರು, ಭಾರತವು ತನ್ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ರಾಷ್ಟ್ರ ಸ್ವದೇಶಿ ಹಡಗು ನಿರ್ಮಾಣದತ್ತ ಸಾಗಲು ಸಂಪೂರ್ಣ ಅವಕಾಶ ಹೊಂದಿದೆ. ನಮ್ಮ ಶತ್ರು ರಾಷ್ಟ್ರಗಳ ಕುತಂತ್ರಕ್ಕೆ ನಾವು ಹೆದರಬೇಕಾಗಿಲ್ಲ ಎಂದು ಚೀನಾ ವಿರುದ್ಧ ಹರಿಹಾಯ್ದಿದ್ದಾರೆ. ಚೀನಾ ಒಂದು ಬೇಜವಾಬ್ದಾರಿ ದೇಶ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವದ ಚೀನಾ ಅಧಿಪತ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ನವಜೋತ್ ಸಿಧುರನ್ನು ತರಾಟೆಗೆ ತೆಗೆದುಕೊಂಡ ಗೌತಮ್ ಗಂಭೀರ್

Share This Article
Leave a Comment

Leave a Reply

Your email address will not be published. Required fields are marked *