‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು

Public TV
2 Min Read

ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತೆ ಜಿಮ್‍ಗೆ ಮರಳಿದ್ದು, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಲ್ಮಾನ್ ತಮ್ಮ ಜಿಮ್ ಬಾಡಿಗೆ ಹೆಚ್ಚು ಫೇಮಸ್. ಸಲ್ಲು ತಮ್ಮ ದೇಹಕ್ಕೆ ಕೊಡುವ ಕಸರತ್ತು ನೋಡಿಯೇ ಎಷ್ಟೋ ಜನರು ಅವರ ಅಭಿಮಾನಿಗಳಾಗುತ್ತಾರೆ. ಸಲ್ಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಮರಳಿ ಬರುತ್ತಿದೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ‘ಸುಲ್ತಾನ್ ಬ್ಯಾಕ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ‘ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹಾಲಿವುಡ್ ನಟನಿಗೆ ಪರಿಚಯ ಮಾಡಿಕೊಂಡ ಸಲ್ಲು

 

View this post on Instagram

 

A post shared by Salman Khan (@beingsalmankhan)

ಈ ಫೋಟೋದಲ್ಲಿ, ಸಲ್ಲು ಜಿಮ್‍ನಲ್ಲಿ ಪುಲ್ಲೋವರ್ ಮಾಡುತ್ತಿದ್ದು, ಅವರ ಲ್ಯಾಡ್ಸ್ ಸಖತ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ‘ನಮ್ಮ ಬಾಯ್ ಹಿಂತಿರುಗಿದರು’ ಎಂದು ಬರೆದರೆ, ‘ಮರಳಿ ಸ್ವಾಗತ’ ಎಂದು ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಸಲ್ಲು ಮತ್ತೆ ವರ್ಕೌಟ್ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.

ಈ ವಾರದ ಆರಂಭದಲ್ಲಿ, ಸೌದಿ ಅರೇಬಿಯಾದ ರಿಯಾದ್‍ನಲ್ಲಿ ನಡೆದ ಜಾಯ್ ಅವಾಡ್ರ್ಸ್ 2022 ರಲ್ಲಿ ಸಲ್ಮಾನ್ ಅವರನ್ನು ಗೌರವಿಸಲಾಗಿತ್ತು. ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅವಾರ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಅವಾರ್ಡ್ ಕಾರ್ಯಕ್ರಮದಲ್ಲಿ ಸಲ್ಲು ‘ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಫೋಟೋಗೆ, ನನ್ನ ಸಹೋದರ ಬು ನಾಸರ್, ನಿಮ್ಮನ್ನು ಭೇಟಿಯಾಗಿ ಸಂತೋಷವಾಯಿತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸಲ್ಲು ಈ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಅದರಲ್ಲಿಯೂ ಸಲ್ಲು ಹಾಲಿವುಡ್ ಸೂಪರ್ ಸ್ಟಾರ್ ಜಾನ್ ಟ್ರಾವೋಲ್ಟಾ ಅವರನ್ನು ಭೇಟಿ ಮಾಡಿ ‘ನನ್ನ ಹೆಸರು ಸಲ್ಮಾನ್ ಖಾನ್’ ಎಂದು ತಮ್ಮನ್ನು ಪರಿಚಯ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

 

View this post on Instagram

 

A post shared by Salman Khan (@beingsalmankhan)

ಅವಾರ್ಡ್ ಸ್ವೀಕರಿಸಿದ ವೇಳೆ ವೇದಿಕೆ ಮೇಲೆ ಮಾತನಾಡಿದ ಅವರು, ನನ್ನನ್ನು ಸುಮಾರು 12 ವರ್ಷ ವಯಸ್ಸಿನವನಾಗಿದ್ದಾಗ ನೀವು ನೋಡಿದ್ದೀರಿ. ಈಗ ನನಗೆ 56 ವರ್ಷ ಎಂದು ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಮಣಿರತ್ನಂ ಸಿನಿಮಾದಲ್ಲಿ ನಾಯಕಿ ಆಗಲು ನಾನು ಚಿತ್ರರಂಗಕ್ಕೆ ಬಂದಿದ್ದೆ : ಅದಿತಿ ರಾವ್

ಸಲ್ಲು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ‘ಟೈಗರ್-3’ ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಸಹ ಕಾಣಿಸಿಕೊಳ್ಳಲಿದ್ದಾರೆ. ಸಲ್ಲು ‘ಭಜರಂಗಿ ಭಾಯಿಜಾನ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಮಾಧ್ಯಮಗಳ ಮೂಲಕ ಖಚಿತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *