ಜ್ಯೋತಿಷಿಗಳಿಂದ ಭಯದ ಬೀಜ ಬಿತ್ತನೆ: ಡಾ.ಶಿವಮೂರ್ತಿ ಶ್ರೀ

Public TV
1 Min Read

ಚಿತ್ರದುರ್ಗ: ಇಂದಿನ ಚಂದ್ರ ಗ್ರಹಣ ಬ್ಲಡ್ ಮೂನ್ (ರಕ್ತ ಚಂದ್ರ) ಅಲ್ಲ, ವಂಡರ್ ಮೂನ್ (ಅದ್ಭುತ ಚಂದ್ರ), ಸೂಪರ್ ಮೂನ್. ಆದರೆ ಇದರ ಬಗ್ಗೆ ಜ್ಯೋತಿಷಿಗಳು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಚಂದ್ರಗ್ರಹಣದಲ್ಲಿ ಮಂಗಳವೋ, ಅಮಂಗಳವೋ ಎನ್ನುವ ಪ್ರಶ್ನೆಯೇ ಇಲ್ಲ. ಎಲ್ಲವೂ ಮಂಗಳವೇ. ಇಂದಿಗೂ ಕೆಲವರು ಪಂಚಾಂಗದ ದಾಸರಾಗಿದ್ದಾರೆ. ಹೀಗಾಗಿ ಜ್ಯೋತಿಷಿಗಳು ಭಯದ ಬೀಜ ಬಿತ್ತಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಚಂದ್ರ ಗ್ರಹಣ ಜಗತ್ತಿನ ಅದ್ಭುತ, ಅದನ್ನು ತಪ್ಪು ಕಲ್ಪನೆಗಳಿಂದ ಬಿಂಬಿಸಲಾಗುತ್ತಿದೆ. ಬ್ರಿಟಿಷರು ಬಂದು ದೇಶ ಆಳಿದರು. ಅವರ ಆಚರಣೆಗಳನ್ನು ಅಳವಡಿಕೊಂಡಿದ್ದೇವೆಯೇ ಹೊರತು ಮೂಢನಂಬಿಕೆಗಳನ್ನು ಕೈ ಬಿಡುವ ಪ್ರಯತ್ನ ಮಾಡಲಿಲ್ಲ ಎಂದು ನುಡಿದರು.

ಚಿತ್ರದುರ್ಗದ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರ ಸಭಾಂಗಣದಲ್ಲಿ ಚಂದ್ರ ಗ್ರಹಣದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೂರಾರು ಮಕ್ಕಳು ಹಾಗೂ ಯುವಕರು ವಿಭೂತಿ, ರುದ್ರಾಕ್ಷಿ ಧರಿಸುವ ಮೂಲಕ ಲಿಂಗದೀಕ್ಷೆ ಪಡೆದರು. ಜೊತೆಗೆ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ನವ ಜೋಡಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *