3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್

Public TV
3 Min Read

– ಲೋಕಸಭೆ ಸೆಮಿಫೈನಲ್‌ನಲ್ಲಿ ಬಿಜೆಪಿ ಕಮಾಲ್
– ನಾಲ್ಕು ರಾಜ್ಯಗಳಲ್ಲಿ ಪ್ರಮುಖರು ಗೆದ್ದಿದ್ಯಾರು, ಸೋತಿದ್ಯಾರು?

ನವದೆಹಲಿ: ಸಾರ್ವತ್ರಿಕ ಚುನಾವಣೆಗೆ ಮೊದಲು ಸೆಮಿಫೈನಲ್ ಎಂದು ಭಾವಿಸಲಾಗಿದ್ದ ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಹಿಂದಿ ರಾಜ್ಯಗಳಲ್ಲಿ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿದೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪ್ರಮುಖವಾಗಿ ಛತ್ತೀಸ್‌ಘಡದಲ್ಲಿ ಕೇಸರಿ ಪತಾಕೆ ಹಾರಿದೆ. ಮಧ್ಯಪ್ರದೇಶದಲ್ಲಿ ಅಖಂಡ ಗೆಲುವಿನೊಂದಿಗೆ `ಕಮಲ’ನಾಥರು ಅಧಿಕಾರ ಉಳಿಸಿಕೊಂಡಿದ್ದಾರೆ. ರಾಜಸ್ಥಾನ, ಛತ್ತೀಸ್‌ಘಡದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಸಿ, ಬಿಜೆಪಿ ಗದ್ದುಗೆ ಏರುತ್ತಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದು ಧೂಳೀಪಟ ಆಗೋದ್ರಿಂದ ಪಾರಾಗಿದೆ. ಉತ್ತರ ಭಾರತದಲ್ಲಿ ಬಿಜೆಪಿ ಪ್ರಜ್ವಲಿಸಲು ಪ್ರಮುಖ ಕಾರಣ ಮೋದಿ ನಾಯಕತ್ವ ಎನ್ನಬಹುದು. ಬೆಳಗ್ಗೆ ಮತದಾನ ಆರಂಭವಾದ ಕ್ಷಣದಿಂದ ನಾಲ್ಕು ರಾಜ್ಯಗಳಲ್ಲಿ ಟ್ರೆಂಡ್ಸ್ ಒಂದೇ ರೀತಿಯಲ್ಲಿತ್ತು. ಎಲ್ಲಿಯೂ ಯಾವ ರಾಜ್ಯಗಳಲ್ಲಿಯೂ ಲೀಡ್ ಬಿಟ್ಟುಕೊಡಲಿಲ್ಲ. ಈ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದನ್ನೂ ಓದಿ: ಮಗನ ಹಂತಕರನ್ನು ಕಾಂಗ್ರೆಸ್‌ ಬೆಂಬಲಿಸಿದ್ದಕ್ಕೆ ಸೇಡು – 7 ಬಾರಿ ಗೆದ್ದಿದ್ದ ‘ಕೈ’ ಶಾಸಕನ ಮಣಿಸಿದ ಬಿಜೆಪಿ ಅಭ್ಯರ್ಥಿ

`ಚತುರ್’ ಫಲಿತಾಂಶ
* ಮಧ್ಯಪ್ರದೇಶ – ಬಿಜೆಪಿ ಗೆಲುವು (ಯಥಾಸ್ಥಿತಿ)
* ರಾಜಸ್ಥಾನ – ಬಿಜೆಪಿ ಗೆಲುವು (ಕಾಂಗ್ರೆಸ್‌ಗೆ ನಷ್ಟ)
* ಛತ್ತೀಸ್‌ಘಡ – ಬಿಜೆಪಿ ಗೆಲುವು (ಕಾಂಗ್ರೆಸ್‌ಗೆ ನಷ್ಟ)
* ತೆಲಂಗಾಣ – ಕಾಂಗ್ರೆಸ್ ಗೆಲುವು (ಕಾಂಗ್ರೆಸ್‌ಗೆ ಲಾಭ)

ಸೆಮಿಫೈನಲ್ ರಿಸಲ್ಟ್ ಲೆಕ್ಕ
* ಬಿಜೆಪಿ – 3 (+2)
* ಕಾಂಗ್ರೆಸ್ – 1 (-1)
* ಬಿಆರ್‌ಎಸ್ – 0 (-1)
* ಬಿಜೆಪಿಗೆ 3-1 ಅಂತರದ ಗೆಲುವು

ಮಧ್ಯಪ್ರದೇಶ; ಗೆದ್ದಿದ್ಯಾರು? ಬಿದ್ದಿದ್ಯಾರು?
* ಶಿವರಾಜ್ ಸಿಂಗ್ ಚೌಹಾಣ್ – ಬಿಜೆಪಿ – ಬುದ್ನಿ – ಗೆಲುವು
* ಕೈಲಾಶ್ ವಿಜಯ್‌ವರ್ಗೀಯ -ಬಿಜೆಪಿ – ಇಂದೋರ್1 – ಗೆಲುವು
* ನರೇಂದ್ರ ಸಿಂಗ್ ತೋಮಾರ್ – ಬಿಜೆಪಿ – ದಿಮಾನಿ – ಗೆಲುವು
* ಕಮಲ್‌ನಾಥ್ – ಕಾಂಗ್ರೆಸ್ – ಚಿಂದ್ವಾರ – ಗೆಲುವು
* ನರೋತ್ತಮ್ ಮಿಶ್ರಾ – ಬಿಜೆಪಿ – ದತಿಯಾ – ಸೋಲು

ರಾಜಸ್ಥಾನ; ಗೆದ್ದಿದ್ಯಾರು? ಬಿದ್ದಿದ್ಯಾರು?
* ಅಶೋಕ್ ಗೆಹ್ಲೋಟ್ – ಕಾಂಗ್ರೆಸ್ – ಸರ್ದಾರ್‌ಪುರ – ಗೆಲುವು
* ಸಚಿನ್ ಪೈಲಟ್ – ಕಾಂಗ್ರೆಸ್ – ಟೋಂಕ್ – ಗೆಲುವು
* ವಸುಂಧರಾ ರಾಜೆ – ಬಿಜೆಪಿ – ಝಲಾರ್‌ಪಟಾಣ್ – ಗೆಲುವು
* ದಿಯಾಕುಮಾರಿ – ಬಿಜೆಪಿ – ವಿದ್ಯಾಧರ್ ನಗರ್ – ಗೆಲುವು
* ಬಾಬಾ ಬಾಲಕ್‌ನಾಥ್ – ಬಿಜೆಪಿ – ತಿಜಾರ – ಗೆಲುವು
* ರಾಜ್ಯವರ್ಧನ್ ಸಿಂಗ್ – ಬಿಜೆಪಿ – ಝೋತ್ವಾರ – ಗೆಲುವು
* ಸಿಪಿ ಜೋಷಿ – ಕಾಂಗ್ರೆಸ್ – ನಾಥ್‌ದ್ವಾರ – ಸೋಲು
* ರಾಜೇಂದ್ರ ರಾಥೊರ್ – ಬಿಜೆಪಿ -ತಾರಾನಗರ್ – ಸೋಲು
* ಕಿರೋಡಿಲಾಲ್ ಮೀನಾ – ಬಿಜೆಪಿ – ಮಾಧೋಪುರ್ – ಗೆಲುವು

ಛತ್ತೀಸಗಢ; ಗೆದ್ದಿದ್ಯಾರು? ಬಿದ್ದಿದ್ಯಾರು?
* ರಮಣ್‌ಸಿಂಗ್ – ಬಿಜೆಪಿ – ರಾಜನಂದಗಾವ್ – ಗೆಲುವು
* ಭೂಪೇಶ್ ಭಘೇಲ್ – ಕಾಂಗ್ರೆಸ್ – ಪಟಾನ್ – ಗೆಲುವು
* ಟಿಎಸ್ ಸಿಂಗ್‌ದೇವ್ – ಕಾಂಗ್ರೆಸ್ – ಅಂಬಿಕಾಪುರ್ – ಸೋಲು

ತೆಲಂಗಾಣ; ಗೆದ್ದಿದ್ಯಾರು? ಬಿದ್ದಿದ್ಯಾರು?
* ಕೆಸಿಆರ್ – ಬಿಆರ್‌ಎಸ್ – ಕಾಮರೆಡ್ಡಿ – ಸೋಲು
* ರೇವಂತ್‌ರೆಡ್ಡಿ – ಕಾಂಗ್ರೆಸ್ – ಕಾಮರೆಡ್ಡಿ – ಸೋಲು
* ವೆಂಕಟರಮಣರೆಡ್ಡಿ -ಬಿಜೆಪಿ – ಕಾಮರೆಡ್ಡಿ – ಬಿಜೆಪಿ ( 5156 ಮತಗಳಿಂದ ಗೆದ್ದಿದ್ದಾರೆ)
* ಕೆಸಿಆರ್ – ಬಿಆರ್‌ಎಸ್ – ಗಜ್ವೇಲ್ – ಗೆಲುವು
* ರೇವಂತ್‌ರೆಡ್ಡಿ – ಕಾಂಗ್ರೆಸ್ – ಕೋಡಂಗಲ್ – ಗೆಲುವು
* ರಾಜಾಸಿಂಗ್ – ಬಿಜೆಪಿ-ಗೋಷಾಮಹಲ್- ಗೆಲುವು
* ಕೆಟಿಆರ್ – ಬಿಆರ್‌ಎಸ್- ಸಿರಿಸಿಲ್ಲ – ಗೆಲುವು
* ಈ.ರಾಜೇಂದರ್ – ಬಿಜೆಪಿ – ಹುಜುರಾಬಾದ್ – ಸೋಲು
* ಈ.ರಾಜೇಂದರ್ – ಬಿಜೆಪಿ – ಗಜ್ವೇಲ್ – ಸೋಲು
* ಬಂಡಿ ಸಂಜಯ್ – ಬಿಜೆಪಿ – ಕರೀಂನಗರ -ಸೋಲು

Share This Article