ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಿ – ಕಾಂಗ್ರೆಸ್‍ಗೆ ಆರ್.ಅಶೋಕ್ ಸಲಹೆ

Public TV
1 Min Read

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದ ಬಳಿಕ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಲಿ ಎಂದು ಸಚಿವ ಆರ್.ಅಶೋಕ್ ಕಾಂಗ್ರೆಸ್‍ಗೆ ಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಗಮನಿಸಿದಾಗ ಮತ್ತೆ, ಮತ್ತೆ, ಮತ್ತೆ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಇಡೀ ದೇಶದಲ್ಲಿ ಕಾಂಗ್ರೆಸ್‍ಗೆ ಪಂಜಾಬ್ ಒಂದೇ ಇದ್ದಿದ್ದು, ಪಂಜಾಬ್ ಕೂಡ ಇದೀಗ ಕಾಂಗ್ರೆಸ್ ಕೈ ತಪ್ಪಿದೆ. ಹಾಗಾಗಿ ಕಾಂಗ್ರೆಸ್‍ಗೆ ಇನ್ನುಮುಂದೆ ಪಾದಯಾತ್ರೆ ಬೇಡ ತೀರ್ಥಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗೋವಾ ಚುನಾವಣಾ ಫಲಿತಾಂಶ: ಬಿಜೆಪಿ, ಕಾಂಗ್ರೆಸ್‌ ಮಧ್ಯೆ ಹಾವು ಏಣಿ ಆಟ

ಜನ ಕಾಂಗ್ರೆಸ್‍ನ್ನು ತಿರಸ್ಕಾರ ಮಾಡಿದ್ದಾರೆ. ಮುಂದೆ ಕಾಂಗ್ರೆಸ್‍ನ್ನು ಜನ ಮೂಲೆ ಗುಂಪು ಮಾಡುತ್ತಾರೆ. ಇದೀಗ ಪಂಚರಾಜ್ಯಗಳ ಫಲಿತಾಂಶಗಳತ್ತ ಗಮನಹರಿಸಿದಾಗ 5 ರಾಜ್ಯಗಳ ಪೈಕಿ 4 ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ದಾಪುಗಾಲಿಡುತ್ತಿದೆ. ಉತ್ತರ ಪ್ರದೇಶದಲ್ಲಿ ಫೈಟ್ ಇದೆ. ಆದರೂ ಬಿಜೆಪಿ ಗೆಲ್ಲಲಿದೆ. ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಜಯಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಂಜಾಬ್‍ನಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್‍ನವರು ಪಾದಯಾತ್ರೆಯ ಬದಲಾಗಿ ತೀರ್ಥಯಾತ್ರೆಗಳ ಕಡೆಗೆ ಹೋಗಲಿ ಎಂದು ಜನ ಕೂಡ ಹೇಳುತ್ತಿದ್ದಾರೆ. ಮತದಾರರ ದಿಕ್ಸೂಚಿ ಈ ಫಲಿತಾಂಶವಾಗಿದ್ದು, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಈ ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತೋಷ ತಂದಿದೆ ಎಂದರು. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

Share This Article
Leave a Comment

Leave a Reply

Your email address will not be published. Required fields are marked *